ಬುಧವಾರ, ಮಾರ್ಚ್ 13, 2024

WPL 2024| ಯುಪಿ ವಾರಿಯರ್ಸ್ ಪ್ಲೇ ಆಫ್ ಕನಸು ಭಗ್ನ! ಭರ್ಜರಿ ಜಯದೊಂದಿಗೆ ಪ್ಲೇ ಆಫ್ ತಲುಪಿದ ಆರ್‌ಸಿಬಿ.

 

ಮುಂಬೈ ಇಂಡಿಯನ್ಸ್ ವಿರುದ್ಧ 7 ವಿಕೆಟ್ ಅಂತರದ ಭರ್ಜರಿ ಜಯ ಗಳಿಸಿದ ಆರ್ಸಿಬಿ ಕೃಪೆ @royalchallengersbangalore

ಆಸ್ಟ್ರೇಲಿಯಾನ್ ಆಲ್ ರೌಂಡರ್ ಎಲಿಸ್ ಪೇರಿಯವರು ತಮ್ಮ ಆಲ್ರೌಂಡರ್ ಪ್ರದರ್ಶನದಿಂದ ಆರ್‌ಸಿಬಿಯನ್ನು ಪ್ಲೇ ಆಫ್ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು 114 ರನ್ಗಳಿಗೆ ಮುಂಬೈ ಇಂಡಿಯನ್ಸ್ ತಂಡವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

ಎಲಿಸ್ ಪೇರಿಯವರು ಈ ಪಂದ್ಯದಲ್ಲಿ ನಾಲ್ಕು ಓವರ್ ಗಳಲ್ಲಿ ಹದಿನೈದು ರನ್ ನೀಡಿ ಆರು ವಿಕೆಟ್ ಪಡೆದುಕೊಂಡರು ಹಾಗೂ ಡಬ್ಲ್ಯೂ ಪಿ ಎಲ್ ಇತಿಹಾಸದಲ್ಲಿ 6 ವಿಕೆಟ್ ಪಡೆದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗುರಿ ಬೆನ್ನಟ್ಟಿದ ಆರ್‌ಸಿಬಿ ತಂಡವನ್ನು ಗೆಲುವಿನ ಗಡಿ ಮುಟ್ಟಿಸಿದ್ದು ಕೂಡ ಪೇರಿಯವರೆ ಆಗಿದ್ದಾರೆ.

ಆರ್ಸಿಬಿ 39 ರನ್ಗಳಿಗೆ ಮೂರು ವಿಕೆಟ್ ಕಳೆದುಕೊಂಡಾಗ ಜೊತೆಗೂಡಿದ ಪೆರಿ ಅವರು 38 ಬಾಲ್ಗಳಲ್ಲಿ 40 ರನ್ ಗಳಿಸಿದರು ಹಾಗೂ ರಿಚ್ ಆಗೋಷ್ 36 ರನ್ ಗಳಿಸಿ ಇನ್ನು ಐದು ಓವರ್ ಗಳು ಬಾಕಿ ಇರುವಾಗಲೇ ಆರ್‌ಸಿಬಿ ತಂಡವನ್ನು ಗೆಲುವಿನ ಗಡಿ ತಲುಪಿಸಿದರು.


ಯುಪಿ ವಾರಿಯರ್ಸ್ ಲೀಗ್ನ ಹಂತದ ಇನ್ನೂ ಒಂದು ಪಂದ್ಯ ಬಾಕಿ ಇದ್ದು ನೆನ್ನೆ ನಡೆದ ಪಂದ್ಯದಲ್ಲಿ ಆರ್‌ಸಿಬಿ ಸೋತು ಇಂದು ನಡೆಯುವ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಗೆದ್ದಿದ್ದರೆ ಪ್ಲೇ ಆಫ್ ತಲುಪುವ ಆಸೆ ಜೀವಂತವಾಗಿರುತ್ತಿತ್ತು, ಆದರೆ ಆರ್ಸಿಬಿ ನೆನ್ನೆ ನಡೆದ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ತಮ್ಮ ಪ್ಲೇ ಆಫ್ ಕನಸನ್ನು ನನಸು ಮಾಡಿಕೊಂಡಿದ್ದಾರೆ.

ಈ ಆರ್ಟಿಕಲ್ ಅನ್ನು ಓದಿದ ಎಲ್ಲಾ ಮಿತ್ರರಿಗೂ ಧನ್ಯವಾದಗಳು.



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ABCD ಕಾರ್ಟೂನ್ ವಿಡಿಯೋ

 https://youtu.be/sxMHMqky5kc