ಶುಕ್ರವಾರ, ಮಾರ್ಚ್ 15, 2024

ಮುಂಬೈಗೆ ಬೈ - ಬೈ ಹೇಳಿ ಫೈನಲ್ಗೆ ಲಗ್ಗೆ ಇಟ್ಟ ನಮ್ಮ ಬೆಂಗಳೂರು|

ಹೌದು ಬೆಂಗಳೂರು ತಂಡ ನೆನ್ನೆ ನಡೆದ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿ ಫೈನಲ್ ತಲುಪಿದ ಆರ್ ಸಿ ಬಿ.
ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ 5 ರನ್ಗಳ ರೋಜಕ ಜಯ.
ನೆನ್ನೆ ನಡೆದ ಪಂದ್ಯದಲ್ಲಿ ಆರ್ ಸಿ ಬಿ ತಂಡವು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು.ಮೊದಲು ಬ್ಯಾಟಿಂಗ್ ಮಾಡಿ ಬೃಹತ್ ಮೊತ್ತ ನೀಡಬೇಕೆನ್ನುವ ಆಸೆ ಈಡೇರಲಿಲ್ಲ.ಮೊದಲು ಬ್ಯಾಟಿಂಗ್ ಮಾಡಿದ ಸ್ಮೃತಿ ಪಡೆ 20 ಓವರ್ ಗಳಲ್ಲಿ ಕೇವಲ 135 ರನ್ ಗಳಿಸಲಸ್ಟೆ ಸಕ್ತರಾದರು.ಇದರಲ್ಲಿ ಸ್ಮೃತಿ ಮಂದಾನ 7 ಬಾಲ್ಗಲ್ಲಿ ಕೇವಲ 10 ರನ್ ಗಳಿಸಿ ಔಟ್ ಆದರು.ಡಿವೈನ್ ಕೂಡ ಕೇವಲ 7 ಬಾಲ್ ಗಳಲ್ಲಿ 10 ರನ್ ಗಳಿಸಿ ಔಟ್ ಆದರು.ನಂತರ ಬಂದ ಪೆರಿ ಯವರು ಕ್ರಿಜ್ ನಲ್ಲಿ ನಿಂತು ಏಕಾಂಗಿ ಹೊರಟ ನೀಡಿ ತಮ್ಮ ಆಲ್ರೌಂಡರ್ ಪ್ರದರ್ಶನದಿಂದ ತಂಡದ ಮೊತ್ತ ವನ್ನು 135 ರನ್ ಗಳ ಗುರಿ ನೀಡಿದರು.ಕೊನೆಯ 10 ಬಾಲ್ ಗಳು ಇರುವಾಗ ಪೆರಿ ರವರು 66 ರನ್ ಗಳಿಸಿ ಔಟ್ ಆದರು.ಇದರಲ್ಲಿ 8 ಫೋರ್ ಮತ್ತು ಒಂದು ಸಿಕ್ಸ್ ಬಾರಿಸಿದ್ದಾರೆ. ವೆರಮ್ ರವರು ಕೊನೆಯ ಬಾಲ್ ನಲ್ಲಿ ಸಿಕ್ಸ್ ಬಾರಿಸಿ ಮೊದಲ ಇನ್ನಿಂಗ್ಸ್ ಮುಕ್ತಾಯಗೊಳಿಸಿದರು.
ಸಾಧಾರಣ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ಅಂತಹ  ಗೆಲುವು ನಮ್ಮದೆ ಅಂದುಕೊಂಡಿದ್ದರು,3.5 ನೇ ಓವರ್ ನಲ್ಲಿ ಬಂದಿದ್ದ ಶ್ರೇಯಾಂಕ ಪಾಟೀಲ್ ರವರು Matthew's ರವರ ವಿಕೇಟ್ ತೆಗೆದು ಬ್ರೇಕ್ ತ್ರೂ ತಂದುಕೊಟ್ಟರು. ನಂತರ ಬಂದ ಪೆರಿ ರವರು ತಮ್ಮ ಓವರ್ ನ ಕೊನೆಯ ಬಾಲ್ ನಲ್ಲಿ ಭಾಟಿಯಾ ರವರ ವಿಕೇಟ್ ತೆಗೆದು ಪಂದ್ಯ ವನ್ನೂ ತಮ್ಮತ್ತ ಮಾಡಿಕೊಂಡರು.ಆದರೆ ನಂತರ ಬಂದ ಜೋಡಿ ಒಂದ್ ಒಂದೇ ರನ್ ಗಳಿಸಿ ತಂಡವನ್ನು ಗೆಲುವಿನ ಕಡೆ ಕರೆತರುತಿದ್ದರು ಆದರೆ ಶ್ರೇಯಾಂಕ ಪಾಟೀಲ್ ರವರು ತಮ್ಮ ಓವರ್ ನ ಕೊನೆಯ ಬಾಲ್ ನಲ್ಲಿ ಹರ್ಮನ್ ಪ್ರೀತ್ ರ ವಿಕೇಟ್ ತೆಗೆದು ಪಂದ್ಯ ಗತಿಯನ್ನೇ ಬಲಿಸಿದರು.ಇನ್ನೂ ಕೊನೆಯ ಎರಡು ಓವರ್ ಗಳಲ್ಲಿ ಕೇವಲ  13 ರನ್ ಬೇಕಾದಾಗ ಸೋಫಿ ಮೊಲಿನಕ್ಸ್ ರವರು ಸಜನ ರವರ ವಿಕೇಟ್ ತೆಗೆದು ಪಂದ್ಯ ವನ್ನ ತಮ್ಮತ್ತ ಮಾಡಿಕೊಂಡರು.ಕೊನೆಯ ಓವರ್ ನಲ್ಲಿ ಆಶಾ ರವರು ತಮ್ಮ ತಂಡಕ್ಕೆ ಆಶಾ ಕಿರಣ ವಾಗಿ ಬಂದು ತಂಡವನ್ನು ಗೆಲುವಿನ ಕಡೆ ಕರೆದೊಯ್ದರು.ಕೊನೆಗೂ ಬೆಂಗಳೂರು ತಂಡ ಮೊದಲ ಬಾರಿ wpl ನಲ್ಲಿ ಫೈನಲ್ ಗೆ ತಲುಪಿದೆ . ಈ ಬಾರಿ ಯಾದರೂ ಅಭಿಮಾನಿಗಳ ಆಸೆ ಈಡೇರಲಿ ಎಂದು ಆಶಿಸೋಣ.
ಪ್ಲೇಯರ್ ಆಫ್ ದಿ ಮಾಚ್ - ಎಲಿಶ್ ಪೆರಿ.
ಮುಂದಿನ ಫೈನಲ್ ಪಂದ್ಯ ಡೆಲ್ಲಿ vs ಬೆಂಗಳೂರು ನಡುವೆ ಅರುಣ್ ಜೇಟ್ಲಿ ಸ್ಟೇಡಿಯಂ ನಲ್ಲಿ ನಾಳೆ ನೆಡಿಯಲಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ABCD ಕಾರ್ಟೂನ್ ವಿಡಿಯೋ

 https://youtu.be/sxMHMqky5kc