ಭಾನುವಾರ, ಮಾರ್ಚ್ 17, 2024

16 ವರ್ಷದ ಕನಸು ನನಸು| ತಮ್ಮ ಚೊಚ್ಚಲ ಕಪ್ ಗೆ ಮುತ್ತಿಟ್ಟ RCB ನಾರಿಮಣಿ ಗಳು!

 16 ವರ್ಷಗಳ ಬಳಿಕ RCB ತಮ್ಮ ಚೊಚ್ಚಲ ಕಪ್ ಗೆದ್ದಿದ್ದಾರೆ.

ಡೆಲ್ಲಿ ವಿರುದ್ಧ 8 ವಿಕೇಟ್ ಗಳ ಭರ್ಜರಿ ಜಯ

ಹೌದು rcb ಮಹಿಳಾ ತಂಡವು 8 ವಿಕೆಟ್ಗಳ ಜಯ ಪಡೆದು ತಮ್ಮ ಚೊಚ್ಚಲ ಕಪ್ ನ್ನು ಎತ್ತಿ ಹಿಡಿದಿದ್ದಾರೆ.

ಮೊದಲು ಟಾಸ್ ಗೆದ್ದ ಡೆಲ್ಲಿ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು ಆದರೆ ಡೆಲ್ಲಿ ತಂಡ ಬೃಹತ್ ಮೊತ್ತ ನೀಡುವಲ್ಲಿ ವಿಫಲವಾಯಿತು.ಇನ್ನೂ ಡೆಲ್ಲಿ ತಂಡವು ಪವರ್ ಪ್ಲೇ ಕೊನೆಯ ಓವರ್ ವರೆಗೂ ಚೆನ್ನಾಗಿಯೇ ಬ್ಯಾಟಿಂಗ್ ನಡೆಸಿತ್ತು ,ಆದರೆ 7 ನೆ ಓವರ್ ನಲ್ಲಿ ಬಂದ ಸೋಫಿ ಮೇಲೆ ನ್ಯೂ ರವರು 3 ವಿಕೇಟ್ ತೆಗೆದು ಪಂದ್ಯ ಗತಿಯನ್ನೇ ಬಲಿಸಿದರು.ತದನಂತರ ಬಂದ ಶ್ರೇಯಾಂಕ ಪಾಟೀಲ್ 4 ವಿಕೇಟ್ ಹಾಗೂ ಆಶಾ ರವರು ತಲಾ 2 ವಿಕೇಟ್ ತೆಗೆದು ಕೇವಲ 113 ರನ್ ಗಳಿಗೆ ಡೆಲ್ಲಿ ತಂಡವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಬ್ಯಾಟಿಂಗ್ ಮಾಡಿದ ಸ್ಮೃತಿ ಪಡೆಯು ಸುಲಭ ಜಯನ್ನ ಗಳಿಸಿದ್ದಾರೆ.

ಸ್ಮೃತಿ ಮಂಧನ 39 ಬಾಲ್ ಗಳಲ್ಲಿ 31,ಸೋಫಿ ಡಿವೈನ್ 27 ಬಾಲ್ ಗಳಲ್ಲಿ 32 ರನ್ ಹಾಗೂ ಪೆರಿ ರವರು 37 ಬಾಲ್ ಗಳಲ್ಲಿ 35 ಬಾರಿಸಿ ಪಂದ್ಯ ವನ್ನ ತಮ್ಮದಾಗಿಸಕೊಂಡಿದ್ದಾರೆ.

ಪ್ಲೇಯರ್ ಆಫ್ ದೀ ಮ್ಯಾಚ್ ಸೋಫಿ ಮೊಲಿನ್ಯೂಕ್ಸ್

ಪಡೆದು ಕೊಂಡಿದ್ದಾರೆ.

ಪರ್ಪಲ್ ಕ್ಯಾಪ್ ಶ್ರೇಯಾಂಕ ಪಾಟೀಲ್ ಪಡೆದುಕೊಂಡರೆ ಇನ್ನೂ ಆರೇಂಜ್ ಕ್ಯಾಪ್ ಪೆರಿ ರವರು ಪಡೆದುಕೊಂಡಿದ್ದಾರೆ.

ಇನ್ನು 16 ವರ್ಷದ ಅಭಿಮಾನಿಗಳ ಮನದಾಸೆ ಇಂದು ನೆರವೇರಿದೆ.

#ಈ ಸಲ ಕಪ್ ನಮ್ಮದೆ ಕ್ಷಮಿಸಿ ನಮ್ಮದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ABCD ಕಾರ್ಟೂನ್ ವಿಡಿಯೋ

 https://youtu.be/sxMHMqky5kc