ಗುರುವಾರ, ಮಾರ್ಚ್ 21, 2024

17 ನೇ ಆವೃತ್ತಿಯ ಐಪಿಎಲ್ ಗೆ ಇಂದು ಚಾಲನೆ: ಉದ್ಘಾಟನಾ ಪಂದ್ಯದಲ್ಲಿ CSK vs RCB ಪಂದ್ಯ|

ಚೆನ್ನೈ ಸೂಪರ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು


 ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ಕಾದು ನಿಂತಿರುವ ಐಪಿಎಲ್ ಇನ್ನೂ ಕೆಲವೇ ಗಂಟೆಗಳಲ್ಲಿ ಅಂದರೆ ಸಂಜೆ 6:30ಕ್ಕೆ ಉದ್ಘಾಟನಾ ಕಾರ್ಯಕ್ರಮ, ರಾತ್ರಿ 8 ಗಂಟೆಗೆ CSK vs RCB ನಡುವೆ ಚೇಪಾಕ್ ಸ್ಟೇಡಿಯಂನಲ್ಲಿ ಮೊದಲ ಪಂದ್ಯವನ್ನು ನಡೆಯಲಿದೆ.

ಚೆನ್ನೈ ಸೂಪರ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು: ಕೋಟ್ಯಾಂತರ ಅಭಿಮಾನಿಗಳು ತುದಿಗಾಲಿನಲ್ಲಿ ಕಾದು ನಿಂತಿರುವ  ಐಪಿಎಲ್ 2024ಕ್ಕೆ ಇಂದು ಚಾಲನೆ ಸಿಗಲಿದೆ. ಸಂಜೆ 6:30ಕ್ಕೆ ಉದ್ಘಾಟನಾ ಕಾರ್ಯಕ್ರಮ, ರಾತ್ರಿ 8 ಗಂಟೆಗೆ CSK vs RCB ನಡುವೆ ಚೆಪಾಕ್ ಸ್ಟೇಡಿಯಂನಲ್ಲಿ ಮೊದಲ ಪಂದ್ಯವನ್ನು ನಡೆಯಲಿದೆ.

ಬಹು ನಿರೀಕ್ಷಿತ  17 ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಇಂದು ಚಾಲನೆ ಸಿಗಲಿದೆ. ಚೆನ್ನೈ ನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮ. ರುತು ರಾಜ್ ಗಾಯಕ್ವಾಡ್ ನಾಯಕತ್ವದ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಫಾಫ್  ಡೂಪ್ಲೆ ಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (CSK vs RCB) ತಂಡ ಮುಖಾಮುಖಿಯಾಗಲಿ. ಇದರ ಜೊತೆಗೆ ಸಂಜೆ 6:30ಕ್ಕೆ ಉದ್ಘಾಟನಾ ಸಮಾರಂಭವು ಆರಂಭಗೊಳ್ಳಲಿದೆ. ಪಂದ್ಯದ ಟಿಕೆಟ್ ಸಂಪೂರ್ಣ ಸೋಲ್ಡೌಟ್ ಆಗಿದ್ದು, ರಣ ರೋಚಕ ಕದನ ನಿರೀಕ್ಷಿಸಲಾಗಿದೆ. 

ರುತು ರಾಜ್ ಗಾಯಕ್ವಾಡ್ ರವರ ತಂಡವು ಡೆವೊನ್ ಕಾನ್ವೆ ಅವರ ಅನುಪಸ್ಥಿತಿಯಲ್ಲಿದ್ದು, ಆರಂಭಿಕ ಸ್ಲಾಟ್ ಗೆ ಯಾರು ಆಯ್ಕೆಯಾಗುತ್ತಾರೆ ಎಂದು ಕಾದು ನೋಡಬೇಕು. ಇದರ ಹೊರತಾಗಿ ಎರಡೂ ತಂಡಗಳು ಶಕ್ತಿಯುತ ಬ್ಯಾಟಿಂಗ್ ಲೈನ್ ಗಳನ್ನು ಹೊಂದಿದೆ. ರುತು ರಾಜ್ ಗಾಯಕ್ವಾಡ್, ಮೊಯಿನ್ ಅಲಿ,ಶಿವಂ ದುಬೆ,ಎಂ ಎಸ್ ಧೋನಿ, ರವಿಂದ್ರ ಜಡೇಜಾ ಮತ್ತು ಅಜಿಂಕ್ಯ ರಹಾನೆ ರವರಂತಹವರು CSK ಯ ಬ್ಯಾಟಿಂಗ್ ಬಲವಾಗಿದ್ದಾರೆ. Rcb ವಿರಾಟ್ ಕೊಹ್ಲಿ,ನಾಯಕ ಫಾಫ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು ಕಳೆದ ಋತುವಿನಲ್ಲಿ ನೆಚ್ಚಿಕೊಂಡಿತ್ತು ಆದರೆ ಈ ಬಾರಿ ರಜತ್ ಪಟಿದಾರ್ ಮತ್ತು ಕ್ಯಾಮರೋನ್ ಗ್ರೀನ್ ಸೇರ್ಪಡೆಗೊಂಡ ಕಾರಣ ಆರಂಭಿಕ ಒತ್ತಡ ಕೊಂಚ ಕಡಿಮೆ ಆಗಲಿದೆ.

ಕಳೆದ ಋತುವಿನಲ್ಲಿ ಪತಿರಾಣ ಡೆತ್ ಬೌಲಿಂಗ್ ಿಎಸ್‌ಕೆಯ ಯಶಸ್ಸಿನ ಹಿಂದಿನ ಪ್ರಮುಖ ಕಾರಣಗಳಲ್ಲಿ ಒಂದಾಗಿತ್ತು. ಆದರೆ, ಈ ಬಾರಿ ಅವರು ಮಂಡಿ ರಜ್ಜು ಗಾಯದಿಂದಾಗಿ ಆರಂಭಿಕ ಕೆಲವು ಪಂದ್ಯಗಳನ್ನು ಕಳೆದುಕೊಂಡಿದ್ದಾರೆ. ಇನ್ನು ಎಲ್ಲರ ಕಣ್ಣು ಚೊಚ್ಚಲ ಐಪಿಎಲ್ ಮಾಡುತ್ತಿರುವ ರಚಿನ್ ರವೀಂದ್ರ ರವರ ಮೇಲಿದೆ. ಇನ್ನು ಆರಂಭಿಕ ಬ್ಯಾಟರಾದ ಕಾನ್ವೆ ಅವರ ಅನುಪಸ್ಥಿತಿ ಇರುವ ಕಾರಣ ರಚಿನ್ ರವೀಂದ್ರರವರಿಗೆ ಚಾನ್ಸ್ ನೀಡುವ ಸಂಭವವಿದೆ. ಕಿವಿ ಅಗ್ರ ಕ್ರಮಾಂಕದ ಬ್ಯಾಟರ್ ಆಗಿ ಇವರು ಭಾರತದಲ್ಲಿ ನಡೆದ ಏಕದಿನ ವಿಸ್ಕಪ್ ನಲ್ಲಿ 64.22ರ ಸರಾಸರಿಯಲ್ಲಿ 578 ರನ್ ಗಳಿಸಿ ಸಾಧನೆ ಮಾಡಿದ್ದರು.

ಮೇಲ್ನೋಟಕ್ಕೆ ಎರಡು ತಂಡದ ಬ್ಯಾಟಿಂಗ್ ಲೈನ್ ಬಲಿಷ್ಠವಾಗಿದೆ. ಆದರೆ, ಬೌಲಿಂಗ್ ನಲ್ಲಿ ಕೊಂಚ ದುರ್ಬಲ ವಾದಂತೆ ಕಾಣುತ್ತಿದೆ. ಚೇಪಾಕ್ ಪಿಚ್ ಸ್ಪಿನ್ನರ್ ಗಳಿಗೆ ಸ್ವರ್ಗ ಎಂದು ಪರಿಗಣಿಸಲಾಗಿದೆ. ಈ ಪಿಚ್ ನಲ್ಲಿ ಬ್ಯಾಟ್ಸ್ಮನ್ ಗಳು ಬಹಳ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಬೇಕು. ಒಮ್ಮೆ ಇಲ್ಲಿ ನೆಲೆಯೂರಿದರೆ ದೊಡ್ಡಯಿನ್ನಿಂಗ್ಸ್ ನೋಡಬಹುದು. ಇನ್ನು ಪಂದ್ಯಕ್ಕೆ ಮಳೆಹಡ್ಡಿ ಪಡಿಸುವ ಸಾಧ್ಯತೆ ಕಮ್ಮಿ ಇದೆ.

ಉಭಯ ತಂಡಗಳು:

ಚೆನ್ನೈ ಸೂಪರ್ ಕಿಂಗ್ಸ್: ಎಂ ಎಸ್ ಧೋನಿ, ರುತು ರಾಜ್ ಗಾಯಕ್ವಾಡ್ (ನಾಯಕ), ಮೋಯಿನ್ ಅಲಿ, ರಜಿನ್ ರವೀಂದ್ರ,ದೀಪಕ್ ಚಹಾರ್,ತುಷಾರ್ ದೇಶಪಾಂಡೆ,ಶಿವಂ ದುಬೆ,ಅಜಿಂಕ್ಯ ರಹಾನೆ,ರವೀಂದ್ರ ಜಡೇಜಾ ,ಅಜಯ್ ಮಂಡಲ್,ರಾಜವರ್ಧನ್ ಹಂಗೇಕರ್,ಮುಖೇಶ್ ಚೌಧರಿ, ಶೇಖ್ ರಶೀ ದ್, ಪ್ರಶಾಂತ್ ಸೋಲಂಕಿ, ಮಹೇಶ್ ತಿಕ್ಷಣ, ಶಾರ್ದುಲ್ ಠಾಕೂರ್, ಸಮೀರ್ ರಿಜ್ವೆ, ಡೇರಿಯಲ್ ಮಿಚಲ್, ಅವನಿಶ್ ರಾವ್ ಅರಾವಳಿ.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ , ರಜತ್ ಪಾಟದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಮಹಿಪಾಲ್ ಲೊಮ್ರೋರ್,ಸುಯಶ್ ಪ್ರಭುದೇಸಾಯಿ,ವಿಲ್ ಜಾಕ್ವೆಿನ್, ಮನೋಜ್ ಧಾಂಡೆಗೆ, ಮಾಯಾಂಕ್ ದಾಗರ್, ವಿಜಯ್ ಕುಮಾರ್ ವೈ ಶಾಕ್, ಕರಣ್ ಶರ್ಮ ,ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಹಿಮಾಂಶು ಶರ್ಮ, ರಾಜನ್ ಕುಮಾರ್, ಕ್ಯಾಮರೋನ್ ಗ್ರೀನ್, ಅಲ್ಜಾರಿ ಜೋಸೆಫ್, ಯಶ್ ದಯಾಳ್ , ಟಾಮ್ ಕರನ್, ಸ್ವಪ್ನಿಲ್ ಸಿಂಗ್, ಸೌರವ್ ಚೌಹಾನ್ ಹಾಗೂ ಲಾಕಿ ಫಾರ್ಗೂಸನ್.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ABCD ಕಾರ್ಟೂನ್ ವಿಡಿಯೋ

 https://youtu.be/sxMHMqky5kc