ಭಾನುವಾರ, ಮಾರ್ಚ್ 24, 2024

ಬೆಂಗಳೂರಿನಲ್ಲಿ ನಾಳೆ ಆರ್ ಸಿಬಿ ಗೆ ಮೊದಲ ಪಂದ್ಯ:ತವರಿನಲ್ಲಿ ಗೆದ್ದು ಬೀಗುತ್ತಾ?

 ಬೆಂಗಳೂರು: ಸೋಲಿನೊಂದಿಗೆ ಲೀಗ್ ಆರಂಭಿಸಿರುವ ಆರ್ ಸಿ ಬಿ ತನ್ನ ತವರಿನಲ್ಲಿ ಅಂದರೆ ಬೆಂಗಳೂರಿನಲ್ಲಿ ತನ್ನ ಮೊದಲ ಪಂದ್ಯವನ್ನು ಆಡಲು ಸಜ್ಜಾಗಿದೆ. ಈ ಪಂದ್ಯದಲ್ಲಿ ಆರ್ ಸಿ ಬಿ ಗೆ ಎದುರಾಳಿಯಾಗಿ ಪಂಜಾಬ್ ಕಿಂಗ್ಸ್ ತಂಡವು ಕಣಕ್ಕಿಳಿಯುತ್ತಿದೆ.


ಐಪಿಲ್ 2024 ರ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೀನಾಯ ಸೋಲುಂಡಿದ್ದು. ಆ ಸೋಲಿಂದ ಹೊರ ಬಂದು ಗೆಲುವಿನ ಲಯಕ್ಕೆ ಮರಳಬೇಕಿದೆ. ಚೆಪಾಕ್ ನಲ್ಲಿ ನಡೆದ ಈ ಪಂದ್ಯದಲ್ಲಿ RCB ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ವಿಫಲವಾಗಿತ್ತು.ಆದರೀಗ ಸೋಲಿನೊಂದಿಗೆ ಲೀಗ್ ಆರಂಭಿಸಿರುವ ಆರ್ ಸಿ ಬಿ ತನ್ನ ತವರಿನಲ್ಲಿ ಅಂದರೆ ಬೆಂಗಳೂರಿನಲ್ಲಿ ತನ್ನ ಮೊದಲ ಪಂದ್ಯವನ್ನು ಆಡಲು ಸಜ್ಜಾಗಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ಶುಭಾರಂಭ ಮಾಡಲಿದೆಯ ಕಾದು ನೋಡಬೇಕಿದೆ.ಇನ್ನೂ ಈ ಪಂದ್ಯದಲ್ಲಿ ಎದುರಾಳಿಯಾಗಿ ಪಂಜಾಬ್ ಕಿಂಗ್ಸ್ ತಂಡವು ಕಣಕ್ಕಿಳಿಯಲಿದ್ದಾರೆ.ಒಂದಡೆ RCB ತನ್ನ ಮೊದಲ ಗೆಲುವಿಗಾಗಿ ಕಾಯುತ್ತಿದ್ದರೆ, ಇನ್ನೊಂದೆಡೆ ಹಾಡಿದ ಮೊದಲ ಪಂದ್ಯದಲ್ಲಿ ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸುವ ಮೂಲಕ ಪಂಜಾಬ್ ತಂಡ ತನ್ನ ಗೆಲುವಿನ ಸರಣಿಯನ್ನು ಮುಂದುವರೆಸಲು ಎದುರು ನೋಡುತ್ತಿದೆ.

ದುರ್ಬಲ ಬೌಲಿಂಗ್ ವಿಭಾಗ:

ಆಡಿದ ಮೊದಲ ಪಂದ್ಯದಲ್ಲೇ ಆರ್ ಸಿ ಬಿ ಯ ನ್ಯೂಯತೆಗಳು ಜಗಜ್ಜಾಹೀರಾಗಿದೆ.ತಂಡವು ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿ ಬಲ ಹೀನವಾಗಿ ಕಾಣುತ್ತಿದೆ. ಅದರಲ್ಲೂ ಬೌಲಿಂಗ್ ವಿಭಾಗದಲ್ಲಿ ಬದಲಾವಣೆಯ ಅಗತ್ಯವಿದೆ. ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ತಂಡದ ಬೌಲರ್ಗಳು ಪರಿಣಾಮಕಾರಿಯಾಗಿರಲಿಲ್ಲ ಹೀಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಾದರೂ ಬೌಲರ್ ಗಳಿಂದ ಉತ್ತಮ ಪ್ರದರ್ಶನದ ಅಗತ್ಯವಿದೆ.

ಮಂಕಾದ ಬ್ಯಾಟಿಂಗ್ ವಿಭಾಗ: 

 ಬೌಲಿಂಗ್ ಜೊತೆಗೆ ಬ್ಯಾಟಿಂಗ್ ನಲ್ಲೂ ಆರ್ಸಿಬಿ ಬ್ಯಾಟರ್ ಗಳು ಫಾರ್ಮ್ ಕಂಡುಕೊಳ್ಳಬೇಕಾಗಿದೆ. ಆರಂಭಿಕರಾಗಿ ಡುಪ್ಲೇಸಿಸ್ ಅಬ್ಬರಿಸಿದ್ದನ್ನು ಬಿಟ್ಟರೆ ಉಳಿದಂತೆ ತಂಡದ ಅಗ್ರ ಕ್ರಮ ಅಂಕದ ಆಟಗಾರರು ಸಪ್ಪೆ ಪ್ರದರ್ಶನ ನೀಡಿದ್ದರು. ವಿರಾಟ್ ಕೊಹ್ಲಿ ಸೇರಿದಂತೆ ಪಾಟಿದರ್,ಮ್ಯಾಕ್ಸ್ವೆಲ್, ಕ್ರಮಾರನ್ ಗ್ರೀನ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. ಇದು ತಂಡವನ್ನು ಆರಂಭದಲ್ಲಿ ಸಂಕಷ್ಟಕ್ಕೆ ಸಿಲುಕಿಸಿತ್ತು. ಆದರೆ ಕೆಳ ಕ್ರಮಾಂಕದಲ್ಲಿ ಜೊತೆಯಾದ ದಿನೇಶ್ ಕಾರ್ತಿಕ್ ಮತ್ತು ಅನುಜ್ ರಾವತ್ ಜಾಣತನದಿಂದ ಆಟವಾಡಿ ತಂಡದ ಸ್ಕೋರನ್ನು 173 ರಂದು ಗಡಿ ದಾಟಿಸಿದರು. ಆದರೆ ಪ್ರತಿ ಬಾರಿಯೂ ಕೆಳ ಕ್ರಮಾಂಕದ ಬ್ಯಾಟರ್ ಗಳ ಮೇಲೆ ಅವಲಂಬಿತವಾಗುವುದು ಸಾಧ್ಯವಿಲ್ಲ, ಹೀಗಾಗಿ ಹಿರಿಯ ಆಟಗಾರರಾದ ವಿರಾಟ್, ನಾಯಕ ಡೂಪ್ಲೆಸಿಸ್, ಮತ್ತು ಮ್ಯಾಕ್ಸ್ವೆಲ್ ದೊಡ್ಡ ಇನ್ನಿಂಗ್ಸ್ ಆಡಬೇಕಾಗುತ್ತದೆ.

ತಂಡಗಳು ಈ ಕೆಳಗಿನಂತಿವೆ:

ಪಂಜಾಬ್ ಕಿಂಗ್ಸ್: ಶಿಖರ್ ಧವನ್ (ನಾಯಕ) ಮ್ಯಾಥ್ಯು ಶಾರ್ಟ್,ಪ್ರಭ್ ಸಿಮ್ರಾನ್ ಸಿಂಗ್, ಜಿತೇಶ್ ಶರ್ಮ,ಸಿಕಂದರ್ ರಾಜಾ, ರಿಷಿ ದವನ್, ಲಿಯಾಮ್ ಲಿವಿಂಗ್ ಸ್ಟೋನ್, ಅಥರ್ವ ಟೇಡೆ, ಹರ್ಷದೀಪ್ ಸಿಂಗ್ ,ನಾಥನ್ ಎಲ್ಲಿಸ್, ಸ್ಯಾಮ್ ಕರನ್, ಕಗಿಸೊ ರಬಾಡ, ಹರ್ಪ್ರೀತ್ ಬ್ರಾರ್, ರಾಹುಲ್ ಚಹರ್, ಹರಪ್ರೀತ್ ಭಾತ್ರಿಯ, ವಿದ್ವತ್ ಕಾವೇರಪ್ಪ ,ಶಿವಂ ಸಿಂಗ್ ,ಹರ್ಷಲ್ ಪಟೇಲ್,ಕ್ರಿಸ್ ವೋಕ್ಸ್, ಆಶು ತೋಸ್ ಶರ್ಮಾ, ವಿಶ್ವನಾಥ್ ಪ್ರತಾಪ್ ಸಿಂಗ್, ಶಶಾಂಕ್ ಸಿಂಗ್, ತನಯ್ ತ್ಯಾಗರಾಜನ್, ಪ್ರಿನ್ಸ್ ಚೌಧರಿ , ರಿಲೆ ರೋಸ್ಸೋ.

ರಾಯಲ್ ಚಾಲೆಂಜರ್ಸ್ ಬೆಂಗಳೂರು:

ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ , ರಜತ್ ಪಾಟದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಮಹಿಪಾಲ್ ಲೊಮ್ರೋರ್,ಸುಯಶ್ ಪ್ರಭುದೇಸಾಯಿ,ವಿಲ್ ಜಾಕ್ವೆಿನ್, ಮನೋಜ್ ಧಾಂಡೆಗೆ, ಮಾಯಾಂಕ್ ದಾಗರ್, ವಿಜಯ್ ಕುಮಾರ್ ವೈ ಶಾಕ್, ಕರಣ್ ಶರ್ಮ ,ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಹಿಮಾಂಶು ಶರ್ಮ, ರಾಜನ್ ಕುಮಾರ್, ಕ್ಯಾಮರೋನ್ ಗ್ರೀನ್, ಅಲ್ಜಾರಿ ಜೋಸೆಫ್, ಯಶ್ ದಯಾಳ್ , ಟಾಮ್ ಕರನ್, ಸ್ವಪ್ನಿಲ್ ಸಿಂಗ್, ಸೌರವ್ ಚೌಹಾನ್ ಹಾಗೂ ಲಾಗಿ ಫಾರ್ಗೂಸನ್.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ABCD ಕಾರ್ಟೂನ್ ವಿಡಿಯೋ

 https://youtu.be/sxMHMqky5kc