ಸೋಮವಾರ, ಮಾರ್ಚ್ 25, 2024

ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಟೈಟನ್ಸ್ ಗೆ 6 ರನ್ ಗಳ ಭರ್ಜರಿ ಜಯ!

 ಐಪಿಎಲ್ 2024ರ ಐದನೇ ಉತ್ಪನ್ನ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಹೈ ಕದನದಲ್ಲಿ ಆತಿತೆಯ ಗುಜರಾತ್ ತಂಡ ಬಲಿಷ್ಠ ಮೊಂಬೈ ತಂಡಕ್ಕೆ ಆರು ರಂಗಗಳು ಸೋಲುಣಿಸಿದೆ.

ಗುಜರಾತ್ ಟೈಟಾನ್ಸ್ ಗೆ 6 ರನ್ಗಳ ಜಯ .

ಐಪಿಎಲ್ ನ ಐದನೇ ತಂಡವು ಮುಂಬೈ ತಂಡವನ್ನು ಆರು ರನ್ ಗಳಿಂದ ಸೋಲಿಸಿ ಪಂದ್ಯವನ್ನು ಮೊದಲ ಜಯ ಸಾಧಿಸಿದೆ. ತೀವ್ರ ಕುತೂಹಲದಿಂದ ಕೂಡಿದ ಈ ಕಾರ್ಯಕ್ರಮ ಕೊನೆಯವರೆಗೂ ಗೆಲುವು ಯಾವ ತಂಡಕ್ಕೆ ಸಿಗುವುದು ಎಂದು ನಿರೀಕ್ಷಿಸಲು ಆಗಲಿಲ್ಲ ಗೆಲುವಿನ ಫೇವರೆಟ್ ಎನಿಸಿಕೊಂಡ ಮುಂಬೈ ಗೆಲ್ಲುವ ಪಂದ್ಯವನ್ನು ಕೈ ಚೆಲ್ಲಿತ್ತು. ಇತ್ತ ಮೊದಲ ಪಂದ್ಯದ ನಾಯಕತ್ವದಲ್ಲಿ ಗಿಲ್ ತಮ್ಮ ಚಾಣಾಕ್ಷತೆಯಿಂದಾಗಿ ಕೈಜಾರಿತಿದ್ದ ಪಂದ್ಯವನ್ನು ತಮ್ಮತಮ್ಮ ಮಾಡಿಕೊಂಡರು. ಇದರಲ್ಲಿ ಗುಜರಾತ್ ಬೌಲ್ ಪ್ರಭಾವವು ಹೆಚ್ಚಿತ್ತು. ಗುಜರಾತ್ ತಂಡವನ್ನು ಬಿಟ್ಟು ಮುಂಬೈ ಇಂಡಿಯನ್ಸ್ ತಂಡವನ್ನು ಮಾಜಿ ನಾಯಕ ಹಾರ್ದಿಕ್ ಪಾಂಡ್ಯಾಗೆ ಸೋಲಿನ ರುಚಿ ನೀಡುವ ಮೂಲಕ ಗುಜರಾತ್ ತಂಡವು ಯಶಸ್ವಿಯಾಗಿದೆ.

11 ವರ್ಷಗಳ ಸಂಪ್ರದಾಯ ಮತ್ತೆ ಶುರು.
ಈ ಪಂದ್ಯದ ಸೋಲಿನೊಂದಿಗೆ ಕಳೆದ 11 ವರ್ಷಗಳ ಸಂಪ್ರದಾಯವನ್ನು ಮುಂದುವರಿಸಿದೆ. ಮುಂಬೈ ಇಂಡಿಯನ್ಸ್ ಐಪಿಎಲ್ ಸೀಸನ್ ನ ಮೊದಲ ಪಂದ್ಯದಲ್ಲಿ ಸೋಲುವ ತನ್ನ ಹಳೆಯ ಚಾಳಿಯನ್ನು ಈಗಲೂ ಮುಂದುವರಿಸಿದೆ .ಈ ಪಂದ್ಯದಲ್ಲಿ ಟಾಸ್ ಗೆದ್ದು ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು, ಅದರಂತೆ ಮೊದಲು ಬ್ಯಾಟ್ ಮಾಡಿದ ಗುಜರಾತ್ ತಂಡವು 20 ಓವರ್ ಗಳಲ್ಲಿ 168 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್ ಗಳಲ್ಲಿ ಒಂಬತ್ತು ವಿಕೆಟ್ ಗಳ ನಷ್ಟಕ್ಕೆ 162 ರನ್ ಗಳಿಸಲಷ್ಟೇ ಶಕ್ತವಾಯಿತು, ಹಾಗೂ ಆರು ರನ್ ಗಳಿಂದ ಸೋಲು ಕಂಡಿತು. ಗುಜರಾತ್ ಗೆಲುವಿನೊಂದಿಗೆ ಶುಭಾರಂಭ ಮಾಡಿದ್ದಾರೆ.

168 ರನ್ ಟಾರ್ಗೆಟ್ ನೀಡಿದ ಗುಜರಾತ್.
  ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡವು 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 168 ರನ್ ಗಳಿಸಿತು. ಗುಜರಾತ್ ಪರ ಬ್ಯಾಟಿಂಗ್ ಮಾಡಿದ ಸಾಯಿ ಸುದರ್ಶನ್ 45 ರನ್ ಗಳ ಗರಿಷ್ಠ ಆಟ ಆಡಿದರು. ಇವರಲ್ಲದೇ ನಾಯಕ ಗಿಲ್ 31 ರನ್ ಮತ್ತು ತೇವಾಟಿಯ 22 ರನ್ ಗಳ ಕೊಡುಗೆ ನೀಡಿದರು. ಮುಂಬೈ ಪರ ಬೂಮ್ರ ಮೂರು ವಿಕೆಟ್ ಪಡೆದರು ಜೆರಾಲ್ಡ್ ಕೊಯೆಟ್ಟಿ ಎರಡು ವಿಕೆಟ್ ಪಡೆದರು , ಪಿಯೂಷ್ ಚಾವ್ಲಾ ಒಂದು ವಿಕೆಟ್ ಪಡೆದರು.

ರೋಹಿತ್- ಬ್ರೇವಿಸ್ ಹೊರಟ ವ್ಯರ್ಥ.
ಗುಜರಾತ್ ನೀಡಿದ 168 ರನ್ ಗಳ ಗುರಿ ಬೆನ್ನಟ್ಟಿದ ಮುಂಬೈ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಆಟಗಾರ ಈಶಾನ್ ಶೂನ್ಯತೆ ಔಟ್ ಆದರೆ ನಂತರ ಬಂದ ನಮನ್ ಕೂಡ ಆಕ್ರಮಣಕಾರಿ ಆಟಕ್ಕೆ ಮುಂದಾಗಿ ಬೇಗನೆ ಪೆರಿಲಿಯನ್ ಸೇರಿದರು. ಈ ವೇಳೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ಬ್ರೇವಿಸ್ ಮೂರು ಸಿಕ್ಸ್ ಮತ್ತು ಎರಡು ಬೌಂಡರಿಗಳ ಸಹಿತ ಮುಂಬೈಪರ ಅತ್ಯಧಿಕ 46 ರನ್ ಗಳಿಸಿದರೆ ಮಾಜಿ ನಾಯಕ ರೋಹಿತ್ ಶರ್ಮ 29 ಎಸೆತಗಳಲ್ಲಿ 43 ರನ್ ಕೊಡುಗೆ ನೀಡಿದರು. ನಂತರ ಬಂದ ತಿಲಕ್ ವರ್ಮ 25 ರನ್ ಗಳಿಗೆ ಇನ್ನಿಂಗ್ಸ್ ಮುಗಿಸಿದರು. ಈ ಪಂದ್ಯದಲ್ಲಿ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದ ಹಾರ್ದಿಕ ಪಾಂಡ್ಯ 4 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿ 11 ರನ್ ಬಾರಿಸಿದರು ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ ಈ ಮೂಲಕ ಮುಂಬೈ ಇಂಡಿಯನ್ಸ್ ತಂಡವು ಆರು ರನ್ ಗಳ ಸೋಲು ಕಂಡಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ABCD ಕಾರ್ಟೂನ್ ವಿಡಿಯೋ

 https://youtu.be/sxMHMqky5kc