ಸೋಮವಾರ, ಮಾರ್ಚ್ 25, 2024

ಇಂದು ಬೆಂಗಳೂರಿನಲ್ಲಿ RCB ಮೊದಲ ಪಂದ್ಯ; ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಪೊಲೀಸ್ ಬಂದೋಬಸ್ತ್!

 ಇಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸ್ಟೇಡಿಯಂ ನಲ್ಲಿ ಆರ್ ಸಿ ಬಿ ವರ್ಸಸ್ ಪಂಜಾಬ್ ತಂಡ ಗಳ ನಡುವೆ ಹಣಾಹಣಿ ನಡೆಯಲಿದೆ.ಹೀಗಾಗಿ ಎಲ್ಲ ರೀತಿಯ ತಯಾರಿ ನಡೆದಿದೆ. ಇತ್ತೀಚೆಗೆ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಘಟನೆ ನಡೆದಿರುವ ಹಿನ್ನಲೆ ಪೊಲೀಸರು ಹೆಚ್ಚಿನ ಭದ್ರತೆ ನೀಡುತ್ತಿದ್ದು ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತ ಹದ್ದಿನ ಕಣ್ಣಿಟ್ಟಿದ್ದಾರೆ .

Chinnaswamy stadium, Bengaluru


ಬೆಂಗಳೂರು:ಐಪಿಲ್ (IPL) ಉದ್ಘಾಟನ ಪಂದ್ಯದಲ್ಲಿ ಸೋಲು ಕಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal challengers Bengaluru) ತಂಡ ಗೆಲುವಿನ ಆಸೆಯೊಂದಿಗೆ ದ್ವಿತೀಯ ಪಂದ್ಯವನ್ನಾಡಲು ಸಜ್ಜಾಗಿದೆ. ಇಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಆರ್‌ಸಿಬಿ ವರ್ಸಸ್ ಪಂಜಾಬ್ ಪಂದ್ಯ ನಡೆಯಲಿದೆ.ಆರ್‌ಸಿಬಿ ಗೆ ಇದು ಮೊದಲ ತವರಿನ ಪಂದ್ಯವಾಗಿದ್ದು, ಆರ್‌ಸಿಬಿ ಅಭಿಮಾನಿಗಳು ಪಂದ್ಯ ವೀಕ್ಷಣೆಗೆ ಕಾತುರದಿಂದ ಕಾಯುತ್ತಿದ್ದಾರೆ. ಮತ್ತೊಂದಡೆ ಇಂದು ಬೆಂಗಳೂರಿನಲ್ಲಿ ಪಂದ್ಯ ಹಿನ್ನೆಲೆ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಸಾರ್ವಜನಿಕರ ತಪಾಸಣೆಗಾಗಿ 300 ಮಂದಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಸ್ಟೇಡಿಯಂಗೆ ಬರುವ ಪ್ರತಿಯೊಬ್ಬರನ್ನು ತಪಾಸಣೆ ನಡೆಸಿ ಒಳ ಬಿಡಲಾಗುತ್ತದೆ. ಈಗಾಗಲೇ ಬಿಡಿ ಟಿ ಎಸ್ ಟೀಮ್ ನಿಂದ ಸಂಪೂರ್ಣ ಪರಿಶೀಲನೆ ನಡೆದಿದೆ. ಬಂದೋಬಸ್ತ್ಗಾಗಿ ಡಿ ಸ್ವಾಟ್,ಸಿ ಸ್ವಾಟ್ ಟೀಮ್ ನಿಯೋಜನೆ ಮಾಡಲಾಗಿದೆ. ಹಾಗೂ ಮೊಬೈಲ್ ಕಮಾಂಡರ್ ಸೆಂಟರ್ ವೆಹಿಕಲ್, ನಾಲ್ಕು ಕೆ ಎಸ್ ಆರ್ ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಅಗತ್ಯವಿದ್ದಲ್ಲಿ ಡ್ರೋನ್ ಮೂಲಕವೂ ಹದ್ದಿನ ಕಣ್ಣೀಡಲು ಪೊಲೀಸ್ ಪಡೆ ಸಜ್ಜಾಗಿದೆ. ಅಲ್ಲದೆ ಸ್ಟೇಡಿಯಂ ನ ನಾಲ್ಕು ಕಡೆ ವಾಚ್ ಟವರ್ ನಿರ್ಮಾಣ ಮಾಡಲಾಗಿದೆ. ವಾಚ್ ಪವರ್ ಗಳ ಮೂಲಕ ಸ್ಟೇಡಿಯಂ ನಲ್ಲಿ ನಿಗಾ ಇಡಲಾಗುತ್ತದೆ. ಬ್ಯಾಗ್ , ವಾಟರ್ ಬಾಟಲ್ ಸೇರಿ ಯಾವುದೇ ರೀತಿಯ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ. ಪಂದ್ಯ ವೀಕ್ಷಣೆಗೆ ಬರುವ ಸಾರ್ವಜನಿಕರು ಸಂಜೆ 5:00 ಗಂಟೆಗೆ ಬರಬೇಕು. 5 ಗಂಟೆಯಿಂದಲೇ ಸ್ಟೇಡಿಯಂ ಒಳಗೆ ಬಿಡಲಾಗುತ್ತದೆ. ಬಾಂಬ್ಲ್ಯಾಸ್ಟ್ ಬಳಿಕ ನಗರದಲ್ಲಿ ನಡೆಯುತ್ತಿರುವ ಮೊದಲ ಮ್ಯಾಚ್ ಆಗಿರುವುದರಿಂದ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ. ಈಗಾಗಲೇ ಪೊಲೀಸರು ಬಂದೋಬಸ್ತ್ ರಿಹರ್ಸಲ್ ನಡೆಸಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತಾ ಭಾರಿ ಬಂದೋಬಸ್ತ್ : 

ಇಂದಿನಿಂದ ಚಿನ್ನಸ್ವಾಮಿ ಮೈದಾನದಲ್ಲಿ ಐಪಿಎಲ್ ಪಂದ್ಯಾವಳಿ ಶುರುವಾಗಿದೆ. ಹೀಗಾಗಿ ಪೊಲೀಸರ ಅಲರ್ಟ್ ಆಗಿದ್ದಾರೆ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಬೆನ್ನಲ್ಲೆ ಖಾಕಿ ಅಲರ್ಟ್ ಆಗಿದ್ದು ಕಳೆದು ಒಂದು ವಾರದಿಂದ ಸ್ಟೇಡಿಯಂ ಇಂಚಿಂಚೂ ಬಿಡದಂತೆ ತಪಾಸಣೆ ನಡೆಸಿದ್ದಾರೆ. ಹಾಗೂ 1000 ಪೊಲೀಸರ ನಿಯೋಜನೆ ಮಾಡಲಾಗಿದೆ. ಪ್ರತಿಬಾರಿಗಿಂತ ಈ ಬಾರಿ ದುಪ್ಪಟ್ಟು ಭದ್ರತೆ ಕಲ್ಪಿಸಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ABCD ಕಾರ್ಟೂನ್ ವಿಡಿಯೋ

 https://youtu.be/sxMHMqky5kc