ಮಂಗಳವಾರ, ಮಾರ್ಚ್ 26, 2024

ಮನೆಯಂಗಳದಲ್ಲಿ ಆರ್ಸಿಬೀ ಗೆ ಮೊದಲ ಜಯ ! ಪಂಜಾಬ್ ಕಿಂಗ್ಸ್ ಗೆ ಸೋಲು!

 

ಆರ್ ಸಿ ಬಿ ಗೆ ಮೊದಲ ಜಯ

ಐಪಿಎಲ್ 2024 ರಲ್ಲಿ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಗೆಲುವಿನ ಖಾತೆ ತೆರೆದಿದೆ.ತವರು ನೆಲ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ನಾಲ್ಕು ವಿಕೆಟ್ ಗಳಿಂದ RCB ಗೆದ್ದು ಪಾಯಿಂಟ್ಸ್ ಟೇಬಲ್ ನಲ್ಲಿ 6ನೇ ಸ್ಥಾನಕ್ಕೆ ಏರಿದೆ.

ಐಪಿಎಲ್ 2024ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮೊದಲ ಪಂದ್ಯವನ್ನು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು ಕಂಡಿತು. ಈಗ ತನ್ನ ಹೋಂ ಗ್ರೌಂಡ್ ಆದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಸೋಲಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್ ಗಳಲ್ಲಿ ಆರೂ ವಿಕೆಟ್ ಕಳೆದುಕೊಂಡು 176 ರನ್ ಕಲೆ ಹಾಕಿತು. ಗುರಿ ಬೆನ್ನಟ್ಟಿದ ಆರ್ಸಿಬಿ ಪರ ವಿರಾಟ್ ಕೊಹ್ಲಿ ಅರ್ಧ ಶತಕ ಬಾರಿಸಿದರೆ ಅಂತಿಮವಾಗಿ ದಿನೇಶ್ ಕಾರ್ತಿಕ್ 10 ಎಸೆತಗಳಲ್ಲಿ ಅಜಯ 28 ರನ್ ಮತ್ತು ಮಹಿಪಾಲ್ 8 ಎಸೆತಗಳಲ್ಲಿ 17 ರನ್ಗಳಿಸಿ ಇನ್ನು ನಾಲ್ಕು ಎಸೆತಗಳು ಬಾಕಿ ಇರುವಾಗಲೇ ತಂಡಕ್ಕೆ ಜಯ ತಂದುಕೊಟ್ಟರು.

179ರನ್ಗಳ ಗುರಿ ಬೆನ್ನಟ್ಟಿದ ಆರ್ಸಿಬಿಗೆ ಕೊಹ್ಲಿ ಬೇಗದ ಆರಂಭ ನೀಡಿದರು ಆದರೆ ಮೊದಲ ಓವರ್ನನಲ್ಲೇ ವಿರಾಟ್ ಶೂನ್ಯಕ್ಕೆ ಔಟ್ ಆಗಬೇಕಿತ್ತು. ಆದರೆ ಮೊದಲ ಸ್ಲಿಪ್ ನಲ್ಲಿದ್ದ ಜಾನಿ ಬೈರ ಸ್ಟೋನ್ ಕೊಹ್ಲಿ ಕ್ಯಾಚ್ ಕೈಬಿಟ್ಟರು. ಇದರ ಲಾಭ ಪಡೆದ ವಿರಾಟ್ ಅದೇ ಓವರ್ನಲ್ಲಿ ನಾಲ್ಕು ಬೌಂಡರಿಗಳನ್ನೂ ಹೊಡೆದರು. ಆದರೆ ಇನ್ನೊಂದು ಕಡೆಯಿಂದ ವಿಕೆಟ್ಗಳು ಬೀಳುತ್ತಲೇ ಇದ್ದವು ನಾಯಕ ಡುಪ್ಲೆಸಿಸ್ ಮತ್ತು ಕ್ಯಾಮೆರನ್ ಗ್ರೀನ್ ತಲಾ ಮೂರು ರನ್ ಗಳಿಸಿ ರಬಾಡಗೆ ವಿಕೆಟ್ ಒಪ್ಪಿಸಿದರು. ತದನಂತರ ಬಂದ ರಜತ್ ಪಟಿದಾರ್ 18ರನ್ ಗಳಿಸಿ ಔಟ್ ಆದರು. ಇದೇ ವೇಳೆ ವಿರಾಟ್ 31 ಎಸೆತಗಳಲ್ಲಿ 50 ರನ್ ಗಳಿಸಿ ಅರ್ಧ ಶತಕ ಪೂರೈಸಿದರು. ಪಟಿದಾರ್ ಮತ್ತು ಮ್ಯಾಕ್ಸ್ವೆಲ್ ಅವರು ಹರಪ್ರಿತ್ ಬ್ರಾರ್ ರವರಿಗೆ ವಿಕೆಟ್ ಒಪ್ಪಿಸಿದರು. ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್ ರವರ ಏಕಾಂಗಿ ಹೋರಾಟ ವ್ಯರ್ಥವಾಗಿದೆ. ಆರ್‌ಸಿಬಿಯು ಈ ಪಂದ್ಯವನ್ನು ತಮ್ಮದಾಗಿಸಿಕೊಂಡು ಎರಡು ಅಂಕಗಳನ್ನು ಪಡೆದುಕೊಂಡಿದ್ದಾರೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ABCD ಕಾರ್ಟೂನ್ ವಿಡಿಯೋ

 https://youtu.be/sxMHMqky5kc