ಗುರುವಾರ, ಮಾರ್ಚ್ 28, 2024

ಆರ್‌ಸಿಬಿಯ ದಾಖಲೆ ಉಡೀಸ್! ಹೈದರಾಬಾದ್ಗೆ 31 ರನ್ ಗಳ ಭರ್ಜರಿ ಜಯ! ಮುಂಬೈಗೆ ಎರಡನೇ ಸೋಲು!

 IPL 2024: ಹೈದರಾಬಾದ್ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 17ನೇ ಆವೃತ್ತಿ ಐಪಿಎಲ್ ನ ಎಂಟನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು 31 ರನ್ ಗಳಿಂದ ಮಣಿಸುವ ಮೂಲಕ ಲೀಗ್ ನಲ್ಲಿ ಮೊದಲ ಗೆಲುವು ಸಾಧಿಸಿದೆ.


ಹೈದರಾಬಾದ್ ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ 17ನೇ ಆವೃತ್ತಿ ಐಪಿಎಲ್ ನ ಎಂಟನೇ ಪಂದ್ಯದಲ್ಲಿ ಸನ್ ರೈಸಸ್ ಹೈದರಾಬಾದ್ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು 31 ರನ್ ಗಳಿಂದ ಮಣಿಸುವ ಮೂಲಕ ಲೀಗ್ ನಲ್ಲಿ ಮೊದಲ ಜಯ ಪಡೆದಿದೆ. ಇತ್ತ ಮುಂಬೈ ಇಂಡಿಯನ್ಸ್ ತಂಡವು ಸತತ ಎರಡನೇ ಸೋಲನ್ನು ಅನುಭವಿಸಿದೆ. ಮೊದಲಿಗೆ ಬ್ಯಾಟಿಂಗ್ ಮಾಡಿದ ಸನ್ ರೈಸಸ್ ಹೈದರಾಬಾದ್ ತಂಡವು ಮೂರು ವಿಕೆಟ್ಗಳ ನಷ್ಟಕ್ಕೆ 277 ರನ್ ಗಳಿಸಿ ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿತು. ಇತ್ತ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡವು ಐದು ವಿಕೆಟ್ ಕಳೆದುಕೊಂಡು 246 ರನ್ ಗಳಿಸಿ ಸೋತಿದೆ.

ಮುಂಬೈ ತಂಡಕ್ಕೆ ಸ್ಫೋಟಕ ಆರಂಭ .

ಹೈದರಾಬಾದ್ ನೀಡಿದ 277 ರನ್ ಗಳ ಬೃಹತ್ ಗುರಿ ಬೆನ್ನಟ್ಟಿದ ಮುಂಬೈಗೆ ಬಿರುಸಿನ ಆರಂಭ ಸಿಕ್ಕಿತು. ರೋಹಿತ್ ಹಾಗೂ ಕಿಶನ್ ಬೌಂಡರಿಗಳ ಮಳೆಗರೆದು ತಂಡಕ್ಕೆ ನಿರೀಕ್ಷಿತ ಆರಂಭ ಒದಗಿಸಿದರು. ಈ ಇಬ್ಬರು ಮೊದಲ ವಿಕೆಟ್ಗೆ ಕೇವಲ 3.2 ಓವರ್ ಗಳಲ್ಲಿ 56 ರನ್ ಗಳ ಜೊತೆಯಾಟ ನೀಡಿದರು. ಆದರೆ ನಾಲ್ಕನೇ ಓವರ್ನ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಈಶಾನ್ ಮುಂದಿನ ಸತತದಲ್ಲಿ ಔಟಾದರು. ಕಿಸಾನ್ ತಮ್ಮ ಇನ್ನಿಂಗ್ಸ್ ನಲ್ಲಿ 13 ಎಸೆತಗಳಲ್ಲಿ ನಾಲ್ಕು ಸಿಕ್ಸ್ ಮತ್ತು ಎರಡು ಬೌಂಡರಿಗಳ ಸಹಾಯದಿಂದ 34 ರನ್ ಗಳಿಸಿದರು. ಮುಂದಿನ ಓವರ್ ನಲ್ಲಿ ರೋಹಿತ್ ಕೂಡ 12 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ ಒಂದು ಬೌಂಡರಿ ನೆರವಿನಿಂದ 26 ರನ್ ಗಳಿಸಿ ಔಟಾದರು.

ಮುಂಬೈ ಪರವಾಗಿ ತಿಲಕ್ ವರ್ಮ ಅರ್ಥ ಶತಕ.

ಹೌದು, ನಂತರ ಇನ್ನಿಂಗ್ಸ್ ಜವಾಬ್ದಾರಿ ಹೊತ್ತ ನಮನ್ ಮತ್ತು ತಿಲಕ್ ವರ್ಮ ಬಿರುಸಿನ ಬ್ಯಾಟಿಂಗ್ ಮಾಡಿ ಕೇವಲ ಹತ್ತು ಓವರ್ ಗಳಲ್ಲಿ ತಂಡದ ಮೊತ್ತವನ್ನು 141 ರನ್ ಗಳ ಗಡಿ ದಾಟಿಸಿದರು. ಇದೇ ವೇಳೆ 30 ರನ್ ಗಳಿಸಿದ್ದ ನಮನ್ ಅವರನ್ನು ಜಯದೇವ್ ಮಾಡಿದರು. ನಂತರ ಮೈದಾನಕ್ಕೆ ಬಂದ ಹಾರ್ದಿಕ ಪಾಂಡ್ಯ ಕೂಡ ಬಿರುಸಿನ ಬ್ಯಾಟಿಂಗ್ ಗೆ ಮುಂದಾದರು ಈ ಹಂತದಲ್ಲಿ ತಿಲಕ್ ವರ್ಮ 24 ಎಸೆತಗಳಲ್ಲಿ ತಮ್ಮ ಅರ್ಧ ಶತಕವನ್ನು ಪೂರೈಸಿದರು.

ಇನ್ನು 18 ಎಸತಗಳಲ್ಲಿ ಯಾವುದೇ ಬೌಂಡರಿ ಮುಂಬೈಗೆ ಬರಲಿಲ್ಲ. ಆದರೆ, ಇನ್ನಿಂಗ್ಸ್ ನ 15ನೇ ಓವರ್ ನ ಮೊದಲ ಎಸೆತದಲ್ಲಿ ಪ್ಯಾಟ್ ಕಮಿನ್ಸ್ ಗೆ ತಿಲಕ್ ವರ್ಮ ಬಲಿಯಾದಾಗ ಮುಂಬೈ ಇಂಡಿಯನ್ಸ್ ತಂಡವು ಒತ್ತಡಕ್ಕೆ ಸಿಲುಕಿತು. ಅಂತಿಮವಾಗಿ ತಿಲಕ್ 34 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ಗಳ ನೆರವಿನಿಂದ 64 ರನ್ ಗಳಿಸಿದರು. ಇದಾದ ನಂತರ ಟೀಮ್ ಡೇವಿಡ್ ಮತ್ತು ಹಾರ್ದಿಕ್ ಕೆಲವು ಉತ್ತಮ ಹೊಡೆತಗಳನ್ನು ಬಾರಿಸಿದರು ಸಹ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ.

ಹೈದರಾಬಾದ್ ನ ಇನ್ನಿಂಗ್ಸ್ ಹೀಗಿತ್ತು.

ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ಗೆ ಟ್ರಾವಿಸ್ ಹೆಡ್ ಸಿಡಿಲಬ್ಬರದ ಆರಂಭ ನೀಡಿದರು. ಆದರೆ ಇಲ್ಲಿ ಹೆಡ್ ಅವರ ಸುಲಭ ಕ್ಯಾಚ್ ಕೈ ಚೆಲ್ಲಿದ ಮುಂಬೈ ಆರಂಭದಲ್ಲಿ ಪಂದ್ಯದಿಂದ ಹೊರ ಬಿದ್ದಿತು. ಜೀವದಾನದ ಸದುಪಯೋಗಪಡಿಸಿಕೊಂಡ ಹೆಡ್ 24 ಎಸೆತಗಳಲ್ಲಿ ಒಂಬತ್ತು ಫೋರ್ ಮತ್ತು ಮೂರು ಸಿಕ್ಸರ್ ನೆರವಿನಿಂದ 64 ರನ್ ಗಳಿಸಿದರೆ, ಇತ್ತ ಅಭಿಷೇಕ್ ಶರ್ಮ 23 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಏಳು ಸಿಕ್ಸರ್ ಒಳಗೊಂಡ 63ರ ಗಳಿಸಿದರು. ಈ ಇಬ್ಬರು ಔಟಾದ ನಂತರ ಬಂದ ಕ್ಲಾಸೆನ್ 34 ಎಸೆತಗಳಲ್ಲಿ ಔಟ್ ಆಗದೆ 80 ರನ್ ಹಾಗೂ ಮಾಕ್ರಾಂ 42ರನ್ ಕಲೆ ಹಾಕಿದರು. ಈ ಇಬ್ಬರ ಜೊತೆಯಾಟದಿಂದ ಸನ್ ರೈಸಸ್ ಹೈದರಾಬಾದ್ ತಂಡವು ಬರೋಬ್ಬರಿ 277 ರನ್ ಗಳ ದಾಖಲೆಯ ಮೊತ್ತಕ್ಕೆ ಕೊಂಡೊಯ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ 263 ರನ್ ಗಳ 11 ವರ್ಷದ ದಾಖಲೆಯನ್ನು ಇಂದು ಮುರಿದರು.



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ABCD ಕಾರ್ಟೂನ್ ವಿಡಿಯೋ

 https://youtu.be/sxMHMqky5kc