ಗುರುವಾರ, ಮಾರ್ಚ್ 28, 2024

RCB ತಂಡದಲ್ಲಿ ಬದಲಾವಣೆ ಬಹುತೇಕ ಖಚಿತ!

 


ಇಂಡಿಯನ್ ಪ್ರೀಮಯರ್ ಲೀಗ್ ನ (IPL 2024) 10 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕಲ್ಕತ್ತಾ ಕೈಟ್ ರೈಡರ್ಸ್ ತಂಡಗಳು ನಾಳೆ ಮುಖಾಮುಖಿಯಾಗಲಿದೆ.ಈ ಪಂದ್ಯ ನಾಳೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ನಡೆಯಲಿದ್ದು ಈ ಪಂದ್ಯಕ್ಕಾಗಿ ಆರ್ಸಿಬಿ ತನ್ನ ಪ್ಲೇಯಿಂಗ್ ಇಲೆವೆನ್ ನಲ್ಲಿ ಒಂದು ಬದಲಾವಣೆ ಮಾಡಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಏಕೆಂದರೆ ಕಳೆದ ಎರಡು ಪಂದ್ಯಗಳಲ್ಲಿ ಕಣಕ್ಕಿಳಿದ ಅಲ್ಜಾರಿ ಜೋಸೆಫ್ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬಂದಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 3.4 ಓವರ್ ಗಳಲ್ಲಿ 38 ರನ್ ನೀಡಿದ್ದ ಅಲ್ಜಾರಿ, ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲೂ ನಾಲ್ಕು ಓವರ್ ಗಳಲ್ಲಿ ಬರೋಬ್ಬರಿ 43 ರನ್ ನೀಡಿ ದರು. ಈ ವೇಳೆ ಅವರು ಪಡೆದಿರುವುದು ಕೇವಲ ಒಂದು ವಿಕೆಟ್ ಮಾತ್ರ, ಹೀಗಾಗಿ ಕಲ್ಕತ್ತಾ ಕೈಟ್ ರೈಡರ್ಸ್ ವಿರುದ್ಧದ ನಾಳಿನ ಪಂದ್ಯದಲ್ಲಿ ಅಲ್ಜಾರಿ ಜೋಸೆಫ್ ರವರನ್ನು ಕೈ ಬಿಡುವ ಸಾಧ್ಯತೆ ಇದೆ. ಅಲ್ಲದೆ ರೀಸ್ ಟೊಪ್ಲಿ ಅಥವಾ ಲಾಗಿ ಫಾರ್ ಗಿವ್ಸ್ ಗೆ ಚಾನ್ಸ್ ನೀಡಬಹುದು. ಇದರಂತೆ ಕೆಕೆಆರ್ ವಿರುದ್ಧದ ಪಂದ್ಯಕ್ಕೆ ಆರ್ಸಿಬಿ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿಯಲಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ABCD ಕಾರ್ಟೂನ್ ವಿಡಿಯೋ

 https://youtu.be/sxMHMqky5kc