ಶುಕ್ರವಾರ, ಅಕ್ಟೋಬರ್ 20, 2023

"ಜೀವನದಲ್ಲಿ ಇದ್ದರೆ ಇಂತಹ ಗೆಳೆಯನಿರಬೇಕು!" ಕೊಹ್ಲಿ ಶತಕಕ್ಕೆ ಕಾರಣವಾದ ರಾಹುಲ್ ಗೆ ಅಭಿಮಾನಿಗಳ ಮೆಚ್ಚುಗೆ..!

IIC WORLD CUP, ಪುಣೆ : ನೆನ್ನೆ ನಡೆದ ಭಾರತ vs ಬಾಂಗ್ಲಾದೇಶದ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಭಾರತದ ಪರ ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿ ಶತಕ ಸಿಡಿಸಿ ಮಿಂಚಿದ್ದಾರೆ. ಆದರೆ, ಭಾರತದ ಬ್ಯಾಟರ್ ವಿರಾಟ್ ಕೊಹ್ಲಿ ಶತಕ ತಲುಪಲು ಸುಲಭವಾದ ಸಿಂಗಲ್ ಕೂಡ ಕೈಬಿಟ್ಟಿದ್ದರು. ಈ ಸಂದರ್ಭದಲ್ಲಿ ಕೊಹ್ಲಿ ವಿರುದ್ಧ ಈತ ತನ್ನ ಶತಕಕ್ಕಾಗಿ ಆಡುತ್ತಿದ್ದಾನೆ ತನ್ನ ವಯಕ್ತಿಕ ದಾಖಲೆ ಮಾಡಿಕೊಳ್ಳಲು ಎಂಬ ಮಾತುಗಳು ಕೇಳಿ ಬಂದವು. ಆದರೆ ಈ ಎಲ್ಲಾ ಟೀಕೆಗಳಿಗೆ ಕೆ ಎಲ್ ರಾಹುಲ್ ಸ್ಪಷ್ಟನೆ ನೀಡಿದ್ದಾರೆ.

ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ಗುರುವಾರ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತ ಗೆಲ್ಲುವ ಜೊತೆಗೆ ವಿರಾಟ್ ಕೊಹ್ಲಿ ತಮ್ಮ 48ನೇ ಏಕದಿನ ಶತಕವನ್ನು ದಾಖಲಿಸಿದರು. ಮನಮೋಹಕ ಬ್ಯಾಟಿಂಗ್ ನಡೆಸಿದ ಕೊಹ್ಲಿ 6 ಫೋರ್,4 ಸಿಕ್ಸರ್ನೊಂದಿಗೆ 97 ಎಸೆತಗಳಲ್ಲಿ ಅಜಯ 103 ರನ್ ಚಚ್ಚಿದರು.


ಈ ಪಂದ್ಯದಲ್ಲಿ ಭಾರತವು ಕೇವಲ 41.3 ಓವರ್ ಗಳಲ್ಲಿ 261 ರನ್ ಸಿಡಿಸಿ ಗೆಲುವು ಕಂಡಿತು. ಬಾಂಗ್ಲಾದೇಶ ಅವರ 50 ಓವರ್ ಗಳಲ್ಲಿ 256 ರನ್ ಕಲೆ ಹಾಕಿತ್ತು. ಕ್ರೀಸ್ ನಲ್ಲಿ ಕೊಹ್ಲಿ ಗೆ ಉತ್ತಮ ಬೆಂಬಲ ನೀಡಿದ ಕೆ ಎಲ್ ರಾಹುಲ್ ಅವರು ಅಜಯ 34 ರನ್ ಗಳಿಸಿ ತಮ್ಮ ಇನ್ನಿಂಗ್ಸ್ ಅನ್ನು ಅಂತ್ಯಗೊಳಿಸಿದರು. ವಿರಾಟ್ ಈ ಪಂದ್ಯದಲ್ಲಿ ತಮ್ಮ ಶತಕವನ್ನು ಗಳಿಸಲು ನಾನಾ ಕಸರತ್ತು ನಡೆಸಿದರು. 100 ರನ್ಗಳತ್ತ ಸಮೀಪಿಸುತ್ತಿದ್ದಂತೆ ಕೊಹ್ಲಿ ಬ್ಯಾಟಿಂಗ್ ಶೈಲಿಯಲ್ಲಿ ಕೆಲವು ಬದಲಾವಣೆ ಕಂಡುಬಂದವು. ಭಾರತ ಗೆಲ್ಲಲು 19 ರನ್ ಗಳ ಅಗತ್ಯವಿದ್ದರೆ ಅತ್ತ ಕೊಹ್ಲಿಯ ಶತಕ ತಲುಪಲು ಅಷ್ಟೇ ರನ್ ಬೇಕಾಗಿತ್ತು.

ವಿರಾಟ್ ಶತಕ ತಲುಪಲು ಬೌಂಡರಿಗಳನ್ನು ಸಿಡಿಸಲು ನಿರ್ಧರಿಸಿದರು. ಸ್ಟ್ರೈಕ್ ಉಳಿಸಿಕೊಳ್ಳಲು ಸಿಂಗಲ್ ಕೊಡ ಕೈಬಿಟ್ಟರು. ಈ ಸಂದರ್ಭದಲ್ಲಿ ಕೊಹ್ಲಿ ವಿರುದ್ಧ ಕೆಲವು ಮಾತುಗಳು ಕೇಳಿ ಬಂದವು. ಈತ ಶತಕಕ್ಕಾಗಿ ಆಡುತ್ತಿದ್ದಾನೆ, ತನ್ನ ವೈಯಕ್ತಿಕ ದಾಖಲೆ ಇವರಿಗೆ ಮುಖ್ಯವಾಗಿದೆ ಎಂಬ ಮಾತುಗಳು ಕೇಳಿ ಬಂದವು, ಇದೀಗ ಈ ಎಲ್ಲಾ ಟೀಕೆಗಳಿಗೆ ಕೆ ಎಲ್ ರಾಹುಲ್ ಸ್ಪಷ್ಟನೆ ನೀಡಿದ್ದಾರೆ.

ಗೆಲುವಿನ ನಂತರ, ಕೊಹ್ಲಿ ಶತಕದ ಸಮೀಪದಲ್ಲಿರುವಾಗ ತಾವು ಏನು ಮಾತನಾಡಿಕೊಂಡವು ಎಂಬುದನ್ನು ಕೆ ಎಲ್ ರಾಹುಲ್ ಬಿಚ್ಚಿಟ್ಟಿದ್ದಾರೆ. ಕೊಹ್ಲಿ ಸತತಗೊಳಿಸುವ ಯೋಜನೆ ಹೊಂದಿರಲಿಲ್ಲ ಮಹತ್ವದ ವಿಶ್ವಕಪ್ ಪಂದ್ಯದಲ್ಲಿ ನಾನು ವೈಯಕ್ತಿಕ ಮೈಲಿಗಲ್ಲನ್ನು ನೋಡುವುದು ಸರಿ ಕಾಣುವುದಿಲ್ಲ ಎಂದು ಹೇಳಿದರಂತೆ.

"ವಿರಾಟ್ ಗೊಂದಲಕ್ಕೆ ಒಳಗಾಗಿದ್ದರು, ಇದು ವಿಶ್ವಕಪ್ ಪಂದ್ಯವಾಗಿದೆ, ದೊಡ್ಡ ವೇದಿಕೆ, ಇಲ್ಲಿ ನನ್ನ ವೈಯಕ್ತಿಕ ಮೈಲಿಗಲ್ಲು ಪಡೆಯುವುದು ಸರಿಯಲ್ಲ ಸಿಂಗಲ್ ತೆಗೆದು ಪಂದ್ಯ ಗೆಲ್ಲೋಣ ಎಂದು ಕೊಹಿಲಿ ಹೇಳಿದರು, ಆದರೆ ನಾನು ಹೇಳಿದೆ, ನಾವಿನ್ನು ಗೆದ್ದಿಲ್ಲ ಇನ್ನು ಸಾಕಷ್ಟು ಓವರ್ ಬಾಕಿ ಇದೆ ಸುಲಭವಾಗಿ ಗೆಲ್ಲುತ್ತೇವೆ ನೀವು ಶತಕಕ್ಕೆ ಪ್ರಯತ್ನಿಸಿ ಎಂದು ನಾನು ಹೇಳಿದೆ."ಎಂದು ರಾಹುಲ್ ಮಾತನಾಡಿದ್ದಾರೆ.
ವಿರಾಟ್ ಕೊಹ್ಲಿ ಇದೀಗ 48 ಏಕದಿನ ಶತಕ ಪೂರೈಸಿದ್ದಾರೆ, ಸಚಿನ್ ತೆಂಡೂಲ್ಕರ್ ಅವರ 49 ಏಕದಿನ ಶತಕಗಳ ವಿಶ್ವ ದಾಖಲೆಯನ್ನು ಸರಿಗಟ್ಟಲು ಕೊಹ್ಲಿ ಗೆ ಈಗ ಕೇವಲ ಒಂದು ಶತಕ ಬಾಕಿ ಇದೆ ಅಷ್ಟೇ, ಎಲ್ಲಾ ಸ್ವರೂಪಗಳಲ್ಲಿ ಇದು ಕೊಹ್ಲಿಯ 78ನೇ ಅಂತರರಾಷ್ಟ್ರೀಯ ಶತಕವಾಗಿದೆ. 2011 ರಿಂದ ಏಕದಿನ ವಿಶ್ವಕಪ್ಗಳಲ್ಲಿ ಅವರ ಮೂರನೇ ಶತಕವಾಗಿದೆ.

ಹಾಗೂ ಇದೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಗಾಯಗೊಂಡ ಕಾರಣ ವಿರಾಟ್ ಕೊಹ್ಲಿ ಅವರು ಬರೋಬ್ಬರಿ ಆರು ವರ್ಷಗಳ ಬಳಿಕ ಬೌಲಿಂಗ್ ಕೂಡ ಮಾಡಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ABCD ಕಾರ್ಟೂನ್ ವಿಡಿಯೋ

 https://youtu.be/sxMHMqky5kc