ಶನಿವಾರ, ಅಕ್ಟೋಬರ್ 7, 2023

ಏಷ್ಯನ್ ಗೇಮ್ಸ್;ಭಾರತ ಹೊಸ ಮೈಲಿಗಲ್ಲು,ಮೊದಲ ಬಾರಿಗೆ 100 ಪದಕ ಗೆದ್ದ ಭಾರತ.!

ಬೀಜಿಂಗ್: ಇಸ್ ಬಾರ್  💯 ಪಾರ್ ಎಂಬ ಧ್ಯೇಯ ವಾಕ್ಯದೊಂದಿಗೆ ಏಷ್ಯನ್ ಗೇಮ್ಸ್ ನಲ್ಲಿ ಪದಕ ಬೇಟೆ ಆರಂಭಿಸಿದ ಭಾರತ ಕ್ರೀಡಾಪಟುಗಳು ಐತಿಹಾಸಿಕ ನೂರು ಪದಕಗಳ ಮೈಲಿಗಲ್ಲು ತಲುಪಿದ್ದಾರೆ.
ಹೌದು,ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನಲ್ಲಿ ಭಾರತ ನೂರು ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದೆ. ಅಧಿಕೃತವಾಗಿ ಭಾರತ ಈವರೆಗೆ ನೂರು ಪದಕಗಳನ್ನು ಗೆದ್ದಿದೆ.
20 23ರ ಆವೃತ್ತಿಯು ಏಷ್ಯನ್ ಕ್ರೀಡಾಕೂಟದ ಇತಿಹಾಸದಲ್ಲಿ ಭಾರತದ ಅತ್ಯುತ್ತಮ ಆವೃತ್ತಿ ಅಲ್ಲದೆ, ಭಾರತವು ಪದಕ ಬೇಟೆಯಾಡುವ ಪಟ್ಟಿಯನ್ನು ಕೂಡ ಮೂರು ಅಂಕಿಯ ಗಡಿಯನ್ನು ಮುಟ್ಟಿರುವುದು ಇದೇ ಮೊದಲು.
ಇತ್ತೀಚಿನ ದಿನಗಳಲ್ಲಿ ಕ್ರೀಡಾ ಕ್ಷೇತ್ರಗಳಲ್ಲಿ ಭಾರತೀಯರು ದಾಖಲೆಯನ್ನೇ ಬರೆದು ಮೆರೆಯುತ್ತಿದ್ದಾರೆ, ಕ್ರಿಕೆಟ್ ಕಬಡ್ಡಿ ಸೇರಿದಂತೆ ಇನ್ನಿತರ ಎಲ್ಲಾ ರೀತಿಯ ಕ್ರೀಡೆಗಳಲ್ಲಿ ಭಾರತೀಯ ಕ್ರೀಡಾಪಟುಗಳ ಸಾಧನೆ ಮುಗಿಲುತ್ತರಕ್ಕೆ ಏರುತ್ತಿದೆ. ಭಾರತೀಯರ ಕ್ರೀಡಾ ಸಾಧನೆ ವಿಶ್ವದಲ್ಲಿ ಭಾರತದ ಹಿರಿಮೆಯನ್ನು ಮತ್ತಷ್ಟು ಎತ್ತರಕ್ಕೆ ಏರಿಸಿದೆ ಅಂದರೆ ತಪ್ಪಾಗಲಾರದು.
ಇನ್ನು ಭಾರತವು ಏಷ್ಯನ್ ಗೇಮ್ಸ್ ನಲ್ಲಿ 25 ಚಿನ್ನ, 35 ಬೆಳ್ಳಿ, ಹಾಗೂ 40 ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ ಈ ಮೂಲಕ ನೂರು ಪದಕ್ಕೆ ಗಳನ್ನು ಗೆದ್ದುಕೊಂಡ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಯವರು ಕೂಡ ಶುಭಾಶಯ ಕೋರಿ ಸಂಭ್ರಮಿಸಿದ್ದಾರೆ.

2018ರಲ್ಲಿ ಜಕಾತ್ ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಬರಬರಿ 70 ಪದಕಗಳನ್ನು ಗೆಲ್ಲುವ ಮೂಲಕ ಸಾಧನೆ ಮಾಡಿತು. ಈಗ ಮತ್ತೊಮ್ಮೆ ಏಷ್ಯನ್ ಗೇಮ್ಸ್ ನಲ್ಲಿ 100 ಪದಕಗಳನ್ನು ಗೆಲ್ಲುವ ಮೂಲಕ ಮಹತ್ವದ ಸಾಧನೆ ಮಾಡಿದೆ.
ಇನ್ನು ಇದರ ಬಗ್ಗೆ ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದು, ಇದೇ ಅಕ್ಟೋಬರ್ 10 ರಂದು ಏಷ್ಯನ್ ಗೇಮ್ಸ್ ನಲ್ಲಿ ಭಾಗಿಯಾಗಿದ್ದ ಎಲ್ಲಾ ಕ್ರೀಡಾಪಟುಗಳ ಜೊತೆ ಮಾತನಾಡಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.

ನಿನ್ನ ಏಷ್ಯನ್ ಗೇಮ್ಸ್ ಮೆಡಲ್ಸ್ ಸ್ಥಾನದಲ್ಲಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ 354 ಮೆಡಲ್ ಗಳೊಂದಿಗೆ ಮೊದಲ ಸ್ಥಾನಲಂಕರಿಸಿದ್ದು, 169 ಪದಕಗಳೊಂದಿಗೆ ಜಪಾನ್ ಎರಡನೇ ಸ್ಥಾನ ಅಲಂಕರಿಸಿದೆ ಹಾಗೂ 169 ಪದಕಗಳೊಂದಿಗೆ ರಿಪಬ್ಲಿಕ್ ಆಫ್ ಕೊರಿಯಾ ಮೂರನೇ ಸ್ಥಾನ ಪಡೆದಿದೆ ಮತ್ತು ಭಾರತ ನೂರು ಪದಕಗಳೊಂದಿಗೆ ನಾಲ್ಕನೇ ಸ್ಥಾನ ಗಳಿಸಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ABCD ಕಾರ್ಟೂನ್ ವಿಡಿಯೋ

 https://youtu.be/sxMHMqky5kc