ಗುರುವಾರ, ಸೆಪ್ಟೆಂಬರ್ 28, 2023

ಭೂಮಿಯ ಎಂಟನೇ ಖಂಡ ಪತ್ತೆ! "ಝಿಲ್ಯಾಂಡಿಯಾ" ಸಮುದ್ರದಾಳಕ್ಕೆ ಸೇರಿ ಹೋಗಿದ್ದ ಖಂಡ ಪತ್ತೆ!


ನಮಸ್ಕಾರ ಸ್ನೇಹತರೇ,ಭೂಮಿಯ ಮೇಲೆ ಎಷ್ಟು ಖಂಡಗಳಿವೆ ಎಂಬುದು ನಮಗೂ ನಿಮಗೂ ಎಲ್ಲರಿಗೂ ತಿಳಿದಿರುವುದು ಹೇಳು ಖಂಡಗಳು ಅಂತ ಆದರೆ, ಈಗ ಸಮುದ್ರದ ಆಳದಲ್ಲಿ ಉದುಗಿಹೋಗಿದ್ದ ಎಂಟನೇ ಖಂಡ ಒಂದು ಪತ್ತೆಯಾಗಿದೆ.ಆ ಖಂಡವೇ "ಝೀಲ್ಯಾಂಡಿಯ".ಹೌದು ಝೀಲ್ಯಾಂಡಿಯಾ ಎಂಬ ಒಂದು ಹೊಸ ಖಂಡವನ್ನು ಭೂ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.

ನಮಗೆ ತಿಳಿದಿರುವ ಹಾಗೆ ನಾವು ವಾಸವಿರುವ ಭೂಮಿ ಕೋಟ್ಯಾಂತರ ವರ್ಷಗಳಿಂದಲೂ ವಿಕಾಸವಾಗುತ್ತಿದೆ. ವಿಜ್ಞಾನದ ಪ್ರಕಾರ ಕೋಟ್ಯಾಂತರ ವರ್ಷಗಳ ನಂತರ ಮಾನವ ಜೀವರಾಶಿಯು ಉಗಮವಾಯಿತು ಎಂದು ಹೇಳುತ್ತಾರೆ ಹೀಗಿರುವಾಗ ಮನುಷ್ಯನ ಉದಯವಾಗುವ ಮುಂಚೆಯೇ ಭೂಮಿಯ ಎಂಟನೇ ಖಂಡ ಮುಳುಗಿ ಹೋಗಿತ್ತು. ಆದರೆ, ಈಗ ಖಂಡವು ಸಮುದ್ರ ತಳದಲ್ಲಿ ದೊರಕಿದ್ದು ವಿಶ್ವದ ಭೂಪಟಕ್ಕೆ ಎಂಟನೇ ಖಂಡವಾಗಿ ಸೇರ್ಪಡೆಯಾಗಿದೆ.
ಝೀಲ್ಯಾಂಡಿಯಾ ಎಂದರೇನು? ಈಗ ಆ ಖಂಡ ಎಲ್ಲಿದೆ?
ನಿಮಗೆ ನಮಗೆ ತಿಳಿದಿರುವ ಹಾಗೆ ನ್ಯೂಜಿಲೆಂಡ್ ದೇಶ ಒಂದು ದ್ವೀಪ ರಾಷ್ಟ್ರ. ಆದರೆ ಈ ದೇಶ ತುಂಬಾ ಚಿಕ್ಕದಿರಬಹುದು, ಅದರ ಕೆಳಗೆ ಸುತ್ತಲೂ ಸಮುದ್ರದ ಕೆಳಭಾಗದಲ್ಲಿ ಹರಡಿರುವ ಅತಿ ದೊಡ್ಡ ಭೂಭಾಗ ಇದೆ ಅಂದರೆ ನಂಬಲು ಸಾಧ್ಯವಿಲ್ಲ, ಹೌದು ಈ ಭೂಭಾಗವು ಇಲ್ಲಿಯವರೆಗೆ ಇದೆ ಎಂದು ಯಾರಿಗೂ ತಿಳಿದಿರಲಿಲ್ಲ. ಎಲ್ಲರೂ 7 ಖಂಡಗಳು ಅಷ್ಟೇ ಎಂದು ತಿಳಿದಿದ್ದರೂ, ಕೆಲವೊಂದಷ್ಟು ಜನ ಇಲ್ಲ, ಭೂಮಿಯ ಮೇಲೆ ಎಂಟು ಖಂಡಗಳು ಇವೆ ಎಂದು ವಾದ ಮಂಡಿಸುತ್ತಿದ್ದರು ಆದರೆ ಇದಕ್ಕೆ ಯಾವುದೇ ಸಾಕ್ಷಿ ಇರಲಿಲ್ಲ, ಆದರೆ ಇದೀಗ ಸಾಕ್ಷಿ ಸಿಕ್ಕಿದೆ.

ನ್ಯೂಜಿಲೆಂಡ್ ದೇಶದ ಸಮುದ್ರತಳದಲ್ಲಿ ಇರುವ ಬಂಡೆಗಳು ಮತ್ತು ಅಲ್ಲಿನ ಮಣ್ಣಿನ ಮಾದರಿಯನ್ನು ಸಂಗ್ರಹ ಮಾಡಿ ಅಧ್ಯಯನ ನಡೆಸಿದಾಗ ಇದು ಬಹಳ ಹಿಂದೆ ದೊಡ್ಡ ಭೂಭಾಗ ಆಗಿತ್ತು ಅಂತ ಹೇಳಲಾಗಿದೆ. ಝೀಲ್ಯಾಂಡಿಯಾ ಖಂಡವು ಎಷ್ಟು ದೊಡ್ಡದಾಗಿದೆ ಅಂದರೆ, ಆಫ್ರಿಕಾ ಖಂಡದ ಮಡಗಾಸ್ಕರ್ ದ್ವಿಪಕಿಂತ 6 ಪಟ್ಟು ದೊಡ್ಡದಾಗಿದೆ. ಆದರೆ ಈ ಖಂಡದ ಸುಮಾರು 94% ಭಾಗ ಸಮುದ್ರದ ನೀರಿನ ಒಳಗೆ ಇದೆ.
ಝೀಲ್ಯಾಂಡಿಯಾ ಖಂಡದ ಎತ್ತರದ ಪ್ರದೇಶಗಳು ಮಾತ್ರ ನೀರಿನ ಮೇಲೆ ಕಾಣುತ್ತಿದ್ದು, ಈಗಿನ ಈ ನ್ಯೂಜಿಲ್ಯಾಂಡ್ ದೇಶವೇ ಆ ಪ್ರದೇಶವಾಗಿದೆ. ಈ ದೇಶವು ಝೀಲ್ಯಾಂಡಿಯಾ ಖಂಡದ 6% ಮಾತ್ರ ಉಳಿದೆ,ಮಿಕ್ಕ ಭೂಭಾಗವೆಲ್ಲಾ ಸಮುದ್ರದ ತಳದಲ್ಲಿ ಇದೆ.

ಝೀಲ್ಯಾಂಡಿಯಾ ಎಂಬ ಇಷ್ಟು ದೊಡ್ಡ ಭೂಭಾಗ ಸಮುದ್ರದಲ್ಲಿ ಮುಳಿಗಿದ್ದೆಗೆ, ಕಾರಣವೇನು?
ನಾವು ನೆರೆ ನಿಂತಿರುವ ಭಾರತದ ಭೂ ಖಂಡವೂ ಕೂಡ ದಕ್ಷಿಣ ಧ್ರುವದ ಬಳಿಯಲ್ಲಿ ಇತ್ತು. ನಂತರ ಕೋಟ್ಯಂತರ ವರ್ಷಗಳ ಕಾಲ ಸಂಚಾರ ಮಾಡಿ ಇವತ್ತಿನ ಏಷ್ಯಾ ಖಂಡದ ಭಾಗವಾಗಿದೆ. ಅದೇ ರೀತಿ ಭೂಮಿಯಲ್ಲಿ ಇರುವ ಯಾವ ಖಂಡಗಳು ಶಾಶ್ವತವಲ್ಲ. ಕಾರಣ ಭೂಮಿಯ ತಳದಲ್ಲಿರುವ ಲಾಭ ರಸದ ಒತ್ತಡದಿಂದಾಗಿ ಭೂಮಿಯ ಖಂಡಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ತುಂಬಾನೇ ನಿಧಾನವಾಗಿ ಸಾಗುತ್ತವೆ.
ಈ ರೀತಿ ಸಂಚಾರ ಮಾಡುವಾಗ ಒಂದು ಖಂಡ
ಮತ್ತೊಂದು ಖಂಡಕ್ಕೆ ಡಿಕ್ಕಿ ಹೋಡಯಬಹುದು. ಈ ರೀತಿ ಆಗುವುದನ್ನು ಭೂಕಂಪ ವೆಂದು ಕರೆಯುತ್ತಾರೆ. ಇನ್ನು ಏಷ್ಯಾ ಖಂಡಕ್ಕೆ ಭಾರತ ಭೂಖಂಡವು ಕೂಡ ಡಿಕ್ಕಿ ಹೊಡೆಯುತ್ತಲೇ ಇದೆ ಇದರಿಂದ ಹಿಮಾಲಯ ಪರ್ವತಗಳು ವರ್ಷ ವರ್ಷಕ್ಕೆ ಕೆಲವು ಇಂಚುಗಳಷ್ಟು ಎತ್ತರ ಆಗುತ್ತಿದೆ. ಈ ರೀತಿಯ ಭೂಖಂಡಗಳ ಸಂಚಾರವನ್ನು ಮೊದಲು ತಿಳಿಸಿದ್ದು ಜರ್ಮನಿಯ ವಿಜ್ಞಾನಿ ಆಲ್ ಫ್ರೆಡ್ ವೆಗೆನರ್.ಇತ ಇದರ ಬಗ್ಗೆ ಸಿದ್ದಾಂತವನ್ನು ರೂಪಿಸಿದ್ದ. ಈ ಹಿಂದೆ ಭೂಮಿಯ ಮೇಲಿರುವ ಎಲ್ಲಾ ಖಂಡಗಳೂ ಒಂದಾಗಿದ್ದವು ವಿಶಾಲ ಭೂಪ್ರದೇಶ ಇತ್ತು.ಇದನ್ನು ಮೊದಲು ಮಹಾ ಖಂಡ ಅಂತಾ ಕೂಡಾ ಕರೆಯಲಾಗಿತ್ತು,ಹಾಗೂ ಆ ಖಂಡದ ಹೆಸರು ಗೊಂಡ್ವಾನಾ.
  
ಗೊಂಡ್ವಾನಾ ಎಂದರೇನು? 8ನೇ ಖಂಡಕ್ಕೂ, ಗೊಂಡ್ವಾನಾ ಗೂ ಏನು ಸಂಬಂಧ?
ಇಲ್ಲಿಗೆ ಸುಮಾರು 500 ದಶಲಕ್ಷ ವರ್ಷಗಳ ಹಿಂದೆ ಭೂಮಿಯ ಮೇಲಿರುವ ಎಲ್ಲಾ ಏಳು ಖಂಡಗಳು ಒಂದೇ ಆಗಿದ್ದವು. ಅಮೇರಿಕಾ, ಏಷ್ಯಾ, ಆಫ್ರಿಕಾ ಖಂಡಗಳೆಲ್ಲವೂ ಪರಸ್ಪರ ಒಂದಕ್ಕೊಂದು ಅಂಟಿಕೊಂಡಿದ್ದರು ಇದನ್ನು ಗೊಂಡ್ವಾನಾ ಮಹಾಖಂಡ ಎಂದು ಕರೆಯುತ್ತಾರೆ.ಆದರೆ ಈಗ ಇರುವ ಪ್ರಪಂಚವೇ ಬೇರೆಯಾಗಿದೆ.
ಭೂಮಿಯ ಮೇಲಿರುವ ಏಳು ಖಂಡಗಳಲ್ಲಿ ಅತಿ ದೊಡ್ಡ ಕಂಡ ಏಷ್ಯಾ ಅದಲ್ಲದೆ ಜನಸಂಖ್ಯೆಯನ್ನು ಕೂಡ ಏಷ್ಯಾ ಮೊದಲನೆಯದು ಇದಲ್ಲದೆ, ಆಫ್ರಿಕಾ, ಉತ್ತರ ಅಮೆರಿಕ, ದಕ್ಷಿಣ ಅಮೇರಿಕಾ, ಯುರೋಪ್, ಆಸ್ಟ್ರೇಲಿಯಾ ಹಾಗೂ ಅಂಟಾರ್ಟಿಕಾ ಖಂಡಗಳು ಈವರೆಗೂ ಅಸ್ತಿತ್ವದಲ್ಲಿದ್ದು, ಆದರೆ ಇದೀಗ 8ನೇ ಯದಾಗಿ ಹೊಸ ಖಂಡ ಝೀಲ್ಯಾಂಡಿಯಾ ಸೇರ್ಪಡೆಗೊಂಡಿದೆ.
ಝೀಲ್ಯಾಂಡಿಯಾ ಖಂಡವು 375 ವರ್ಷಗಳಿಂದ ಮರೆಯಾಗಿದ್ದ ಖಂಡವೆಂದು ತಿಳಿಸಲಾಗಿದ್ದು ಝೀಲ್ಯಾಂಡಿಯಾ ಖಂಡವು 1.89 ಮಿಲಿಯನ್ ಚದರ ಮೈಲಿಗಳಷ್ಟು ವಿಸ್ತೀರ್ಣವನ್ನು ಹೊಂದಿದೆ. ನ್ಯೂಜಿಲೆಂಡ್ ನಂತೆಯೇ,ಕೆಲವು ದ್ವೀಪಗಳು ಮಾತ್ರ ಸಮುದ್ರದ ಆಳದಿಂದ ಹೊರಗೂಳಿದಿವೆ ಹಾಗೂ ಝೀಲ್ಯಾಂಡಿಯಾವನ್ನು 550 ಮಿಲಿಯನ್ ವರ್ಷಗಳ ಹಿಂದೆ ರೂಪುಗೊಂಡ ಪ್ರಾಚೀನ ಸೂಪರ್ ಕಾಂಟಿನೆಂಟ್ ಗೊಂಡ್ವಾನಾದ ಭಾಗವೆಂದು ಕಂಡುಹಿಡಿಯಲಾಯಿತು.
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ABCD ಕಾರ್ಟೂನ್ ವಿಡಿಯೋ

 https://youtu.be/sxMHMqky5kc