ಸೋಮವಾರ, ಸೆಪ್ಟೆಂಬರ್ 25, 2023

ಲಕ್ಷಾಂತರ ರೂ.ಕಳೆದುಕೊಂಡ ಜನ | ವೆಬ್ ಸೈಟ್ ಮೂಲಕ ವಂಚನೆ,ಮನಿ ಡಬ್ಲಿಂಗ್ ಮೋಸದ ಜಾಲ :

ಬಾಳೆಹೊನ್ನೂರು : ಎಡಬ್ಲ್ಯೂಎಸ್ ಕ್ಲೀನ್ ಎನರ್ಜಿ ವೆಬ್ ಸೈಟ್ ನಲ್ಲಿ ಹಣ ಹೂಡಿಕೆ ಮಾಡಿದರೆ ದ್ವಿಗುಣಗೊಳಿಸುವುದಾಗಿ ಭರವಸೆ ನೀಡಿದ ನಕಲಿ ಸಂಸ್ಥೆಯು ಜನರಿಂದ ಲಕ್ಷಾಂತರ ರೂ. ಹೂಡಿಕೆ ಮಾಡಿಸಿಕೊಂಡು ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಎ ಡಬ್ಲ್ಯೂಎಸ್ ಕ್ಲೀನ್ ಎನರ್ಜಿ ವೆಬ್ಸೈಟ್ ಮೂರು ತಿಂಗಳಿಂದ ಸಾಮಾಜಿಕ ಜಾಲತಾಣಗಳ ಮೂಲಕ ಕೆಲವು ಜನರನ್ನು ನೋಂದಣಿ ಮಾಡಿಸಿಕೊಂಡು ಸಂಸ್ಥೆಯ ವೆಬ್ಸೈಟ್ ಮೂಲಕ ಹಣ ಹೂಡಿಕೆ ಮಾಡಲು ಸದಸ್ಯರಿಗೆ ತಿಳಿಸಿತ್ತು.

ಸಂಸ್ಥೆಗೆ ನಿಗದಿತ ಸಮಯಕ್ಕೆಂದು ಹಣ ಹೂಡಿಕೆ ಮಾಡಿದ್ದಲ್ಲಿ ಪ್ರತಿದಿನ ಹೂಡಿಕೆದಾರರಿಗೆ ಒಂದಷ್ಟು ಹಣವನ್ನು ಸಂಸ್ಥೆ ವಾಪಸ್ ನೀಡಲಿದೆ. ಸಂಸ್ಥೆ ನೀಡಿದ ಅವಧಿ ಮುಕ್ತಾಯಗೊಂಡ ನಂತರ ಮೊದಲು ಹೂಡಿಕೆ ಮಾಡಿದ್ದ ಹಣವನ್ನು ವಾಪಸ್ ನೀಡುವುದಾಗಿ ತಿಳಿಸಿತ್ತು. ಅದರಂತೆ ಬಾಳೆಹೊನ್ನೂರು ಹಾಗೂ ಸುತ್ತಮುತ್ತಲಿನ ಹಲವರು ಕೆಲವು ದಿನಗಳಿಂದ ಚಿನ್ಲಿಂಗ್ ಮೂಲಕ ಸಂಸ್ಥೆಯಲ್ಲಿ ನೊಂದಣಿ ಮಾಡಿಕೊಂಡು ಹಣ ಹೂಡಿದ್ದರು.

ಎ ಡಬ್ಲ್ಯೂ ಎಸ್ ಸಂಸ್ಥೆಯಲ್ಲಿ 2000 ರೂ. ಹೂಡಿಕೆ ಮಾಡಿದ್ದಲ್ಲಿ 90 ದಿನಗಳ ಕಾಲ ನಿತ್ಯ ಐವತ್ತು ರೂ ನಂತೆ ಸಂಸ್ಥೆ ವಾಪಸ್ ನೀಡಲಿದ್ದು. 90 ದಿನಗಳ ಬಳಿಕ 2,000 ರೂಗಳನ್ನು ವಾಪಸ್ ನೀಡಲಿದೆ. ಇದೇ ರೀತಿ 69,000ಗಳನ್ನು 10 ದಿನಗಳ ಅವಧಿಗೆ ಹೂಡಿಕೆ ಮಾಡಿದ್ದಲ್ಲಿ ನಿತ್ಯ 6505 ನೀಡಲಿದ್ದು.10 ದಿನಗಳ ಬಳಿಕ 69 ಸಾವಿರ ವಾಪಸ್, 10,000ವನ್ನು ಏಳು ದಿನಗಳ ಅವಧಿಗೆ ಹೂಡಿಕೆ ಮಾಡಿದ್ದಲ್ಲಿ ನಿತ್ಯ 1,496 ರೂ. ವಾಪಸ್ ನೀಡಿ. ಏಳು ದಿನಗಳ ಬಳಿಕ 10,000 ರೂ ಮರಳಿಸುವ ಭರವಸೆ ನೀಡಿತ್ತು. ಇದೇ ಮಾದರಿಯಲ್ಲಿ ಹಲವಾರು ಸ್ಲಾಬ್ ಗಳ ಆಫರ್ ನೀಡಿತ್ತು. ಇಂಥ ಆಫರ್ ಗಳನ್ನು ನಂಬಿ ಸದಸ್ಯರಾದವರು ಸಂಸ್ಥೆಯಲ್ಲಿ ಕೆಲವು ದಿನಗಳಿಂದ 2000 ದಿಂದ ವಿವಿಧ ಮೊತ್ತಗಳನ್ನು ಹೂಡಿಕೆ ಮಾಡಿದ್ದರು. ಹೂಡಿಕೆ ಮಾಡಿದ ಸದಸ್ಯರಿಗೆ ಆರಂಭದ ದಿನದಿಂದಲೂ ಸೆಪ್ಟೆಂಬರ್ 15 ರವರೆಗೆ ನಿತ್ಯವೂ ಸ್ವಲ್ಪ ಹಣ ಖಾತೆಗೆ ವರ್ಗಾವಣೆಯಾಗುತ್ತಿತ್ತು.
ಸೆಪ್ಟೆಂಬರ್ 15ರಂದು ಸಂಸ್ಥೆ ಗಣೇಶ ಹಬ್ಬಕ್ಕಾಗಿ ವಿಶೇಷ ಆಫರ್ ನೀಡಿತ್ತು. ಹೆಚ್ಚಿನ ಹಣ ಹೂಡಿಕೆ ಮಾಡಿದ್ದಲ್ಲಿ ಕಡಿಮೆ ದಿನಗಳ ಅವಧಿಯಲ್ಲಿ ಹೆಚ್ಚು ಹಣ ಹೊಂದಬಹುದಾಗಿ ಘೋಷಿಸಿತ್ತು. ಇದನ್ನು ನಂಬಿದ ಹಲವರು ಗಣೇಶ ಹಬ್ಬದ ಆಫರ್ ಎಂದು ನಂಬಿ ಲಕ್ಷಾಂತರ ರೂಡಿಕೆ ಮಾಡಿದ್ದರು. ಎ ಡಬ್ಲ್ಯೂ ಎಸ್ ಸಂಸ್ಥೆ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಕಾರ್ಯಾ ಚಟುವಟಿಕೆಯನ್ನು ಎರಡು ದಿನಗಳ ಕಾಲ ಸ್ಥಗಿತಗೊಳಿಸಿದೆ ಎಂದು ಘೋಷಣೆ ಮಾಡಿತು. ಇದನ್ನು ಜನರು ನಂಬಿದ್ದರು, ಆದರೆ ಮಂಗಳವಾರ ಪುನಃ ಇನ್ನಷ್ಟು ಹಣ ಹೂಡಿಕೆ ಮಾಡೋಣ ಎಂದು ಹಲವರು ಸಂಸ್ಥೆ ವೆಬ್ಸೈಟ್ ತೆರೆದರೆ ಆ ವೆಬ್ಸೈಟ್ ಹಾಗೂ ಆಫ್ ತೆರೆಯಲೇ ಇಲ್ಲ. ಹಲವರು ಅನುಮಾನಗೊಂಡು ಸಂಸ್ಥೆ ಹೆಸರಿನಲ್ಲಿ ವಾಟ್ಸಪ್ ರಚನೆಗೊಂಡಿರುವ ಗ್ರೂಪ್ಗಳಲ್ಲಿ ಪ್ರಶ್ನಿಸಿದಾಗ , ಸಂಸ್ಥೆಯ ಮುಖ್ಯಸ್ಥರೆಂದು ಗುರುತಿಸಿಕೊಂಡಿದ್ದ ಕೆಲವು ನಂಬರ್ ಗೆ ಕರೆ ಮಾಡಿ ಕೇಳಿದಾಗ ಎ ಡಬ್ಲ್ಯೂ ಎಸ್ ಸಂಸ್ಥೆ ಮೇಲೆ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದು, ತಕ್ಷಣ ಎಲ್ಲಾ ಸದಸ್ಯರು 2 ಸಾವಿರ ರೂಪಾಯಿಗಳನ್ನು ಪಾವತಿಸಬೇಕು ಅದನ್ನು ತೆರಿಗೆ ಕಚೇರಿಗೆ ಕಟ್ಟಿದರೆ ನಿಮ್ಮ ಹಣ ವಾಪಸ್ ಬರುತ್ತದೆ ಎಂದು ಹೇಳಿದರು. ಇದನ್ನು ನಂಬಿದ ಕೆಲವರು ರೂ.2000ಗಳನ್ನು ಪಾವತಿಸಿದ್ದಾರೆ. ನಂತರ ಎರಡು ಮೂರು ದಿನವಾದರೂ ಸಂಸ್ಥೆಯ ಆಪ್, ವೆಬ್ಸೈಟ್ ಕಾರ್ಯನಿರ್ವಹಿಸುತ್ತಿರಲಿಲ್ಲ ಇದರಿಂದ ಅನುಮಾನ ಗೊಂಡ ಗ್ರಾಹಕರು ಪುನಃ ಮುಖ್ಯಸ್ಥರ ನಂಬರ್ ಗಳಿಗೆ ಕರೆ ಮಾಡಿದಾಗ ಅವುಗಳು ಸ್ವಿಚ್ ಆಫ್ ಆಗಿದ್ದವು, ಈ ವಿಚಾರ ತಿಳಿಯುತ್ತಿದ್ದಂತೆ ಹಲವು ಗ್ರಾಹಕರು ಮೋಸ ಹೋಗಿದ್ದೇವೆ ಎಂದು ಕೈ ಕೈ ಹಿಸುಕಿಕೊಳ್ಳಲಾರಂಬಿಸಿದರು.
ಹಣ ದ್ವಿಗುಣದ ಆಸೆಗೆ ಬಿದ್ದ ಜನ ಲಕ್ಷಾಂತರ ರೂಪಾಯಿಗಳನ್ನು ಕಳೆದುಕೊಂಡು ಮರ್ಯಾದೆಗೆ ಹಂಜಿ ದೂರು ನೀಡಲು ಮುಂದಾಗುತ್ತಿಲ್ಲ. ಕೆಲವು ಕಡೆಗಳಲ್ಲಿ ಪೊಲೀಸರಿಗೆ ಗ್ರಾಹಕರು ದೂರು ಕೊಟ್ಟಿದ್ದಾರೆ ಎನ್ನಲಾಗಿದೆ.
ನಕಲಿ ಐಎಸ್ಒ ಸರ್ಟಿಫಿಕೇಟ್
ಎ ಡಬ್ಲ್ಯೂ ಎಸ್ ಸಂಸ್ಥೆ ಆರಂಭದಲ್ಲಿ ತನ್ನ ಸಂಪೂರ್ಣ ಹೆಸರು ಅಮೆಜಾನ್ ವೆಬ್ ಸರ್ವಿಸ್ ಎಂದು ಹೇಳಿಕೊಂಡಿತ್ತು. ಸಂಸ್ಥೆ ಸಂಪೂರ್ಣ ಪಾರದರ್ಶಕವಾಗಿದ್ದು, ಗ್ರಾಹಕರಿಗೆ ನೀಡುವ ಹಣದಲ್ಲಿ ತೆರಿಗೆ ಸಹ ಕಡಿತಗೊಳ್ಳುತ್ತಿದೆ, ಸಂಸ್ಥೆಯು ನೋಂದಣಿ ಗೊಂಡಿದ್ದು ಐಎಸ್ಓ  ಸರ್ಟಿಫಿಕೇಟ್ ಸಹ ಹೊಂದಿದೆ ಎಂದು ನಕಲಿ ಐಎಸ್ಒ ಸರ್ಟಿಫಿಕೇಟ್ ಅನ್ನು ಸದಸ್ಯರಿಗೆ ತೋರಿಸಿತ್ತು. ಯುವತಿಯರ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆದು ಕೆಲ ಯುವತಿಯರ ಫೋಟೋಗಳನ್ನು ಜಾಲತಾಣಗಳಲ್ಲಿ ಹಾಕಿಕೊಂಡಿತ್ತು. ಮೋ.9932790886,7679045616,9365196587 ಸಂಖ್ಯೆಗಳ ಮೂಲಕ ವಾಟ್ಸಪ್ ನಲ್ಲಿ ಗುಂಪು ರಚನೆ ಮಾಡಿಕೊಂಡು, ಗ್ರಾಹಕರಿಗೆ ಈ ಸಂಖ್ಯೆಗಳ ಮೂಲಕವೇ ಕರೆ ಮಾಡಿ ವ್ಯವಹರಿಸುತ್ತಾ ಹಣ ಹಾಕಿಸಿಕೊಳ್ಳುತ್ತಿದ್ದರು.
"ತೆರಿಗೆ ಹಾಗೂ ಇತರ ಇಲಾಖೆಗಳು ಬ್ಯಾಂಕ್ ಗಳಲ್ಲಿ ಆರ್ ಬಿ ಐ ನಿಯಮ ಎಂದು ಹೇಳಿ ಹಲವು ಕಾನೂನುಗಳನ್ನು ತಂದು ಗ್ರಾಹಕರ  ಬೆವರಿಳಿಸುತ್ತದೆ, ಆದರೆ ಈ ರೀತಿ ಆನ್ಲೈನ್ ಮೂಲಕ ಹಣ ಪಾವತಿಸಿಕೊಂಡು ವಂಚಿಸುತ್ತಿದ್ದರು. ಹಣ ವರ್ಗಾವಣೆ ದಂದೆ ಮಾಡುತ್ತಿದ್ದರು ನಿಗ ವಹಿಸದೆ ಇರುವುದು ಅಮಾನುಷಕ್ಕೆ ಕಾರಣವಾಗಿದೆ, ಹೆಚ್ಚಿನ ಹಣ ಸಿಗುತ್ತದೆ ಎಂದು ನಂಬಿ ಹಣ ಹೂಡಿಕೆ ಮಾಡಿ ಮೋಸ ಹೋದೆ.
|ವಂಚನೆಗೊಳಗಾದ ಗ್ರಾಹಕ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ABCD ಕಾರ್ಟೂನ್ ವಿಡಿಯೋ

 https://youtu.be/sxMHMqky5kc